ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವರದಿಯನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ(ಎನ್ಸಿಆರ್ಬಿ) ಬಿಡುಗಡೆ ಮಾಡಿದ್ದು, ಕರ್ನಾಟಕ ರಾಜ್ಯದಲ್ಲಿ 1,436 ಕೊಲೆಗಳು ನಡೆದಿವೆ. ಕೊಲೆ ಪ್ರಕರಣ ಸಂಬಂಧ 1,322 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 3,015 ಕೊಲೆ ಯತ್ನ ಪ್ರಕರಣಗಳೂ ನಡೆದಿವೆ.

11,584 ಅಪಘಾತಗಳು ಸಂಭವಿಸಿದ್ದು, 14,414 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ನಾಲ್ಕು ಆ್ಯಸಿಡ್ ದಾಳಿ ಪ್ರಕರಣಗಳು ವರದಿಯಾಗಿವೆ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಕೆ ಪ್ರಮಾಣ ಕಡಿಮೆ ಇದೆ ಎಂದು ವರದಿ ವಿಶ್ಲೇಷಿಸಿದೆ.

ಹಿರಿಯರ (60 ವರ್ಷ) ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ. 2022ಕ್ಕೆ ಹೋಲಿಸಿದರೆ, 2023ರಲ್ಲಿ ರಾಜ್ಯದಲ್ಲಿ ಶೇ 35 ಹಾಗೂ ಬೆಂಗಳೂರಿನಲ್ಲಿ ಶೇ 41.7ಕ್ಕೆ ಏರಿಕೆ ಆಗಿದೆ.

2023ರಲ್ಲಿ ಕರ್ನಾಟಕದಲ್ಲಿ ಹಿರಿಯರ ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 1,840 ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರಿನಲ್ಲಿಯೇ 649 ಪ್ರಕರಣಗಳು ದಾಖಲಾಗಿದ್ದವು. ಅದೇ 2022ರಲ್ಲಿ 1,583 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದವು. ಬೆಂಗಳೂರಿನಲ್ಲಿ 459 ಪ್ರಕರಣಗಳು ದಾಖಲಾಗಿದ್ದವು. ನಕಲಿ ದಾಖಲೆ ಸೃಷ್ಟಿ, ಆನ್ಲೈನ್ ವಂಚನೆಯಂತಹ ದೌರ್ಜನ್ಯಗಳೂ ಹಿರಿಯರ ಮೇಲೆ ನಡೆದಿವೆ ಎಂದು ವರದಿ ಹೇಳಿದೆ.

ಹಿರಿಯರ ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಪ್ರಮಾಣವು ಶೇ 64.1ರಷ್ಟು ಇದೆ. ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ 1,334 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 4,360 ಪ್ರಕರಣಗಳು ದಾಖಲಾಗಿದ್ದು, 5,446 ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಈ ಅವಧಿಯಲ್ಲಿ 656 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ವರದಿ ಹೇಳಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ 2023ರಲ್ಲಿ 1.48 ಲಕ್ಷ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ಅದೇ 2022ರಲ್ಲಿ 1.29 ಲಕ್ಷ, 2021ರಲ್ಲಿ 1.15 ಲಕ್ಷ ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ದೋಷಾರೋಪಣೆ ಸಲ್ಲಿಕೆ ಪ್ರಮಾಣ ಶೇ 76.6ರಷ್ಟಿತ್ತು.

ಸೈಬರ್ ಅಪರಾಧ– ಬೆಂಗಳೂರಿನಲ್ಲೇ ಹೆಚ್ಚು: ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ 2023ರಲ್ಲಿ ಹೆಚ್ಚಿನ ಸೈಬರ್ ಅಪರಾಧ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಒಟ್ಟು 17,631 ಪ್ರಕರಣ ದಾಖಲಾಗಿದ್ದು, ಹೈದರಾಬಾದ್, ಮುಂಬೈ ಹಾಗೂ ಲಖನೌ ನಗರವನ್ನು ಬೆಂಗಳೂರು ಹಿಂದಿಕ್ಕಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಬೆಂಗಳೂರು ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳು ಶೇ 77.37ಕ್ಕೆ ಏರಿಕೆಯಾಗಿದೆ.

ಸೈಬರ್ ಅಪರಾಧ ಪ್ರಕರಣಗಳಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಲ್ಲೂ (ಶೇ 18.1) ಬೆಂಗಳೂರು ಹಿಂದಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ 21,889 ಸೈಬರ್ ವಂಚನೆ ಪ್ರಕರಣ ದಾಖಲಾಗಿವೆ. ಇದೇ ಸಂದರ್ಭದಲ್ಲಿ ತೆಲಂಗಾಣದಲ್ಲಿ 18,236, ಉತ್ತರ ಪ್ರದೇಶದಲ್ಲಿ 10,794, ಮಹಾರಾಷ್ಟ್ರದಲ್ಲಿ 8,103 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ.

ನಿರ್ಲಕ್ಷ್ಯದಿಂದ 20 ಮಂದಿ ಸಾವು:
ಎನ್ಸಿಆರ್ಬಿ ವರದಿ ಪ್ರಕಾರ, 2023ರಲ್ಲಿ ಬೆಂಗಳೂರಿನಲ್ಲಿ ಕಳಪೆ ರಸ್ತೆಗಳು ಮತ್ತು ಗುಂಡಿ ಬಿದ್ದ ರಸ್ತೆಗಳಿಂದ ಸಂಭವಿಸಿದ್ದ 19 ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತರೆ 18 ಮಹಾನಗರಗಳಿಗೆ ಹೋಲಿಸಿದರೆ ಸ್ಥಳೀಯ ಸಂಸ್ಥೆಯ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಬೆಂಗಳೂರಿನಲ್ಲಿ ಇಂತಹ ಸಾವುಗಳು ಅತಿ ಹೆಚ್ಚು ದಾಖಲಾಗಿರುವುದು ಇದು ಸತತ ನಾಲ್ಕನೇ ವರ್ಷ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.