‘ಇಲ್ಲಿ ವ್ಯಂಗ್ಯ, ಮೂದಲಿಕೆ ಮತ್ತು ಕಾಲೆಳೆಯುವುದನ್ನು ಸಹಿಸಲಾಗುವುದಿಲ್ಲ’ ಕಾಗದದಲ್ಲಿ ದೊಡ್ಡದಾಗಿ ಬರೆದು ಬೋರ್ಡ್ನಂತೆ ಹಿಡಿದು ನಿಂತೆ.

‘ಇದೇನ್ರೀ ನಿಮ್ಮ ಹೊಸ ವರಸೆ. ಮದುವೆಗೆ ರೆಡಿಯಾಗಿ ಅಲಂಕಾರ ಬೇಡ ಅಂದ್ರು ಅಂದಂಗಾಯ್ತಿದು’ ಎಂದು ನಕ್ಕಳು ಹೆಂಡತಿ.

‘ನೋಡು, ನೋಡು, ಇದೇ ಬೇಡ ಅನ್ನೋದು. ಈ ವ್ಯಂಗ್ಯವೆಲ್ಲ ಬೇಡ ಅಂತಾನೇ ಬೋರ್ಡ್ ಹಿಡ್ಕೊಂಡಿದೀನಿ’.

‘ಚಿಂತಾಮಣಿ ಕೇಸ್ ಆಯ್ತಿದು’ ಎಂದಳು.

‘ಅಂದ್ರೆ?’

‘ಅಂದ್ರೆ, ಚಿಂತಾಮಣಿಯ ಸಬ್ ರಿಜಿಸ್ಟ್ರಾರ್ ಒಬ್ಬರು, ಇಲ್ಲಿ ಲಂಚವನ್ನು ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಂಡಿದ್ದರು’.

‘ಪಾಪ, ಪ್ರಾಮಾಣಿಕರು’.

‘ಪ್ರಾಮಾಣಿಕತೆ ತಗೊಂಡ್ ಏನ್ಮಾಡ್ತೀರಾ, ಅವರನ್ನ ಅಲ್ಲಿಂದ ಎತ್ತಂಗಡಿ ಮಾಡಿಸಿ 3 ತಿಂಗಳಾದರೂ ಅವರಿಗೆ ಇನ್ನೂ ಹುದ್ದೆ ಕೊಟ್ಟಿಲ್ಲ. ಬೋರ್ಡೂ ಕಿತ್ತು ಹಾಕಿದಾರಂತೆ’.

‘ಓಹ್, ಅಂದ್ರೆ ಈಗ ಅಲ್ಲಿ ಲಂಚ ಸ್ವೀಕರಿಸಲಾಗುವುದು ಎಂದಂತಾಯ್ತು’ ನಾನೂ ನಕ್ಕೆ.

‘ಏನ್ ನಗ್ತೀರಾ, ಈಗ ನಿಮ್ಮ ಬೋರ್ಡ್ ಕಿತ್ತು ಹಾಕ್ತೀರೋ, ಹೊಟ್ಟೆಗೆ ಕೂಳು ಇಲ್ಲದೆ ಮೂಲೇಲಿ ಮಲಗ್ತೀರೋ ಯೋಚನೆ ಮಾಡಿ’ ಎಂದಳು.

‘ಪ್ರಾಮಾಣಿಕವಾಗಿ ನಮ್ಮ ಉದ್ದೇಶ, ಆಶಯ, ಆಸೆಯನ್ನ ಹೇಳ್ಕೊಳ್ಳೋದೇ ತಪ್ಪಾ?’ ಅಂದೆ ದೀನನಾಗಿ.

‘ಹುಚ್ಚುಚ್ಚಾಗಿ ಬೋರ್ಡ್ ಹಾಕ್ಕೊಂಡ್ರೆ ಸರ್ಕಾರವೇ ಬಿಡಲ್ಲ. ನಾನು ಬಿಡ್ತೀನಾ?’

‘ಲಂಚ ಸ್ವೀಕರಿಸುವುದಿಲ್ಲ ಅನ್ನೋದು ಹುಚ್ಚುತನವಾ?’

‘ಮತ್ತೇನ್ರೀ… ಈಗ ಎರಡೂವರೆ ವರ್ಷ ಆದ್ಮೇಲೆ ನನಗೆ ಸಿಎಂ ಮಾಡ್ತೀನಿ ಅಂದಿದ್ರಿ, ಈಗ ಮಾಡಿ ಎಂದು ಯಾರೋ ಬೋರ್ಡ್ ಹಾಕ್ಕೊಂಡು ಕೂತರೆ ಹೇಗಿರುತ್ತೆ, ನೀವೇ ಯೋಚನೆ ಮಾಡಿ’ ಎಂದಳು.

‘ಎಲ್ಲಿಂದ ಎಲ್ಲೆಲ್ಲಿಗೋ ಹೋಗ್ತಿಯಲ್ಲಮ್ಮ ನೀನು’

‘ಬೆತ್ತಲೆ ಜಗತ್ತಿನಲ್ಲಿ ಬಟ್ಟೆ ಹಾಕ್ಕೊಂಡೋರೆ ಹುಚ್ಚರು. ಎಲ್ಲೆಡೆ, ಲಂಚ ತಗೊಳೋ ಜನರಿರುವಾಗ ಪ್ರಾಮಾಣಿಕರೇ ಇಲ್ಲಿ ಮೂರ್ಖರು’ ಎಂದಳು ವೇದಾಂತಿಯಂತೆ.

‘ಅಂದ್ರೆ ಏನದರ ಅರ್ಥ’

‘ನಾನು ನಿಮ್ಮ ಕಾಲೆಳೆಯೋದನ್ನ ನಿಲ್ಲಿಸೋಕಾಗಲ್ಲ. ಆ ಬೋರ್ಡ್ ಬಿಸಾಕಿ ಊಟಕ್ಕೆ ಬನ್ನಿ ಅಂತ ಅರ್ಥ’ ಎಂದು ಒಳ ಹೋದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.