ದಿನ ಭವಿಷ್ಯ: ಸಂಗಾತಿಯಿಂದ ಉಡುಗೊರೆ ಸಿಗಲಿದೆ
Published 19 ನವೆಂಬರ್ 2025, 23:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಕಲ ಜವಾಬ್ದಾರಿಗಳನ್ನು ಸುಲಭೋಪಾಯದಲ್ಲಿ ನಿಭಾಯಿಸಿ ಚಾಕಚಕ್ಯತೆಯನ್ನು ಪ್ರದರ್ಶಿಸುವಿರಿ. ಜಗಳಲ್ಲೂ ಉಪಾಯದಿಂದ ವರ್ತಿಸಿದರೆ ಸಹೋದರರ ಜತೆಗೆ ನಿಷ್ಠುರವಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ವೃಷಭ
ನಿಮ್ಮ ಸ್ವಂತಕ್ಕೆಂದು ನೀವು ತೆಗೆದಿಡುವ ಹಣವನ್ನು ಸಹ ಈ ಬಾರಿ ಇತರೆ ಖರ್ಚುಗಳಿಗೆ ಬಳಸುವಿರಿ. ದುಷ್ಟರ ಸಹವಾಸದಿಂದಾಗಿ ಹಾದಿ ತಪ್ಪುತ್ತಿರುವ ಮಕ್ಕಳ ಬಗ್ಗೆ ಎಷ್ಟು ಮೇಲ್ವಿಚಾರಣೆ ನಡೆಸಿದರು ಕಡಿಮೆ ಎಂದೆನಿಸಬಹುದು.
ಮಿಥುನ
ಯಾವ ವಿಷಯದ ಬಗ್ಗೆಯೇ ಆದರೂ ಅತ್ಯಂತ ಆಳವಾದ ಯೋಚನೆ ಬೇಡ. ವಿದೇಶ ಪ್ರಯಾಣ ಕೈಗೊಳ್ಳುವ ಕಾರ್ಯಕ್ರಮವಿರುವುದರಿಂದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಸಲಹೆಗಳತ್ತ ಗಮನ ಕೊಡಿ.
ಕರ್ಕಾಟಕ
ಉದಯೋನ್ಮುಖ ಕವಿಗಳಿಗೆ ಛಂದೋಬದ್ಧ ಕೃತಿಗೆ ಹಿರಿಯ ಸಾಹಿತಿಗಳಿಂದ ಪ್ರಶಂಸೆ ದೊರೆಯುವುದು. ಸ್ನೇಹಿತರಲ್ಲಿ ಹಣಕಾಸಿನ ವಿಚಾರಕ್ಕೆ ಮನಸ್ಥಾಪ ಬರದಂತೆ ಎಚ್ಚರವಹಿಸಿ. ಔಷಧಿ ಮಾರಾಟಗಾರರಿಗೆ ಲಾಭ.
ಸಿಂಹ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿರುವ ನಿಮಗೆ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ಕಡೆಯ ಸಮಯದದಲ್ಲಿ ಅಪಾಯದಿಂದ ಪಾರಾಗುವುದು ನಿರಾಳತೆ ತರಲಿದೆ.
ಕನ್ಯಾ
ಈ ದಿನ ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠವನ್ನು ಕಲಿಯುವಂತಾಗಲಿದೆ. ಮಕ್ಕಳ ಮಾತುಗಳು ಗೊಂದಲಗಳನ್ನು ಸೃಷ್ಟಿಸಬಹುದು. ನಿಮ್ಮ ವಿರೋಧಿಗಳು ರಾಜಿಯಾಗಲಿದ್ದಾರೆ.
ತುಲಾ
ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ನಿಧಾನವಾಗಿ ಯಶಸ್ಸು ಪ್ರಾಪ್ತಿಯಾಗುವುದು. ಕಟ್ಟಡ ನಿರ್ಮಾಣದವರು ಹೊರ ಊರಿನಲ್ಲಿನ ಗುತ್ತಿಗೆ ಪಡೆವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ
ಮುಖ್ಯವಾದ ವಿಷಯವನ್ನು ಮುಖ್ಯವಾದ ವ್ಯಕ್ತಿಯ ಜೊತೆ ಮಾತನಾಡಲು ಮರೆತಿದ್ದರಿಂದ ದಿನಚರಿಯಲ್ಲಿ ವಿಳಂಬ ಅನುಭವಿಸುವಂತೆ ಆಗುವುದು. ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಧನು
ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಬೇಕಿದ್ದರೆ ಅವಿರತ ಶ್ರಮ ಅಗತ್ಯವಾಗುವುದು. ರಾಸಾಯನಿಕ ಔಷಧಿಗಳ ಬಳಕೆಗಿಂತ ತೈಲಗಳ ಲೇಪನದಂತಹ ಚಿಕಿತ್ಸೆ ಮಾಡಿಕೊಳ್ಳುವುದರಿಂದ ಕಾಲು ನೋವು ನಿವಾರಣೆಯಾಗುವುದು.
ಮಕರ
ನಿಮ್ಮ ಹಳೇಯ ಶಾಲೆಗೆ ಭೇಟಿ ನೀಡುವುದರ ಜೊತೆಗೆ ಈಗಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವ ಮೂಲಕ ಅವರಿಗೆ ಮಾರ್ಗದರ್ಶನ ಮಾಡುವಿರಿ. ವ್ಯವಹಾರಸ್ಥರಿಗೆ ಲಾಭ ಹಾಗೆಯೇ ನಷ್ಟವೂ ಇರಲಾರದು.
ಕುಂಭ
ಷೇರುಗಳಲ್ಲಿ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿ ತೋರುವುದಿಲ್ಲ. ವಾತ್ಸಲ್ಯ, ಪ್ರೀತಿಯಿಂದ ಕುಟುಂಬದವರ ಮನಸ್ಸನ್ನು ಗೆಲ್ಲುವಿರಿ. ವಿದ್ಯಾರ್ಥಿಗಳಿಗೆ ಜ್ಞಾನ ದೊರೆತು ಆನಂದವಾಗಲಿದೆ.
ಮೀನ
ತವರು ಮನೆಯ ಜಗಳ ಗಂಡನ ಮನೆಯಲ್ಲಿರುವ ನಿಮ್ಮ ಮನಃಶಾಂತಿಯನ್ನು ಕೆಡಿಸುತ್ತದೆ. ಕಾರ್ಮಿಕರ ಅಸಹಕಾರದಿಂದ ಗೃಹ ನಿರ್ಮಾಣ ವಿಳಂಬವಾಗುತ್ತದೆ. ಸಂಗಾತಿಯಿಂದ ಉಡುಗೊರೆ ಸಿಗಲಿದೆ.