ಸಿಡ್ನಿ: ಯುವತಾರೆ ಆಯುಷ್ ಶೆಟ್ಟಿ ಮತ್ತು ಅನುಭವಿ ಲಕ್ಷ್ಯ ಸೇನ್ ಅವರು ಆಸ್ಟ್ರೇಲಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ವಿಭಿನ್ನ ರೀತಿಯಲ್ಲಿ ಜಯಗಳಿಸಿ ಎಂಟರ ಘಟ್ಟ ತಲುಪಿದರು. ಕ್ವಾರ್ಟರ್ಫೈನಲ್ ಮುಖಾಮುಖಿ ಸಜ್ಜಾದರು.

ಡಬಲ್ಸ್ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರೂ ಸಹ ಎಂಟರ ಘಟ್ಟ ತಲುಪಿದರು. ಈ ಜೋಡಿ 21–18, 21–11 ರಿಂದ ತೈವಾನ್ನ ಸು ಚಿಂಗ್ ಹೆಂಗ್– ವು ಗುವಾನ್ ಜೋಡಿಯನ್ನು 37 ನಿಮಿಷಗಳಲ್ಲಿ ಮಣಿಸಿತು.

ಸಾತ್ವಿಕ್– ಚಿರಾಗ್ ಅವರು ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಫಜರ್ ಅಲ್ಫಿಯಾನ್– ಮುಹಮ್ಮದ್ ಶೊಯಿಬುಲ್ ಫಿಕ್ರಿ (ಇಂಡೊನೇಷ್ಯಾ) ಜೋಡಿಯನ್ನು ಎದುರಿಸಲಿದೆ.

ಈ ವರ್ಷದ ಆರಂಭದಲ್ಲಿ ಅಮೆರಿಕ ಓಪನ್ ಸೂಪರ್ 300 ಟೂರ್ನಿಯ ವಿಜೇತರಾಗಿದ್ದ ಆಯುಷ್ 21–17, 21–16 ರಿಂದ ನಾಲ್ಕನೇ ಶ್ರೇಯಾಂಕದ ಕೊಡೈ ನರವೋಕಾ ಅವರನ್ನು ಸೋಲಿಸಿದರು. ಈ ಪಂದ್ಯ 68 ನಿಮಿಷಗಳವರೆಗೆ ನಡೆಯಿತು. 20 ವರ್ಷ ವಯಸ್ಸಿನ ಆಯುಷ್ ಶೆಟ್ಟಿ ಅವರಿಗೆ ಇದು ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿರುವ ಜಪಾನ್ ಆಟಗಾರ ವಿರುದ್ಧ ಈ ವರ್ಷದ ಎರಡನೇ ಗೆಲುವಾಗಿದೆ.

ಏಳನೇ ಶ್ರೇಯಾಂಕದ ಲಕ್ಷ್ಯ ಸೇನ್ ಮತ್ತೊಂದು ಪಂದ್ಯದಲ್ಲಿ ಮೂರು ಗೇಮ್ಗಳನ್ನು ಕಂಡ 63 ನಿಮಿಷಗಳ ಪಂದ್ಯದಲ್ಲಿ ತೈವಾನ್ನ ಚಿ ಯು ಜೆನ್ ಅವರನ್ನು 21–17, 13–21, 21–13 ರಿಂದ ಸೋಲಿಸಿದರು.

ಈ ವರ್ಷ ಯಾವುದೇ ಟೂರ್ನಿಯಲ್ಲಿ ಪ್ರಿಕ್ವಾರ್ಟರ್ಫೈನಲ್ಗಿಂತ ಮೇಲೆರಲು ವಿಫಲರಾಗಿರುವ ಪ್ರಣಯ್ ಮತ್ತೊಮ್ಮೆ ವಿಫಲರಾದರು. ಎಂಟನೇ ಶ್ರೇಯಾಂಕದ ಪರ್ಹಾನ್ ಅಲ್ವಿ ಅವರು 21–19, 21–10 ರಿಂದ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಪ್ರಣಯ್ ಅವರನ್ನು ಸೋಲಿಸಿದರು.

₹4.21 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯ ಮೂರನೇ ದಿನವಾದ ಗುರುವಾರ ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಕೂಡ ನಿರ್ಗಮಿಸಿದರು. ಜಪಾನ್ನ ಶೋಗೊ ಒಗಾವಾ ಅವರು 22–20, 21–16 ರಿಂದ ಶ್ರೀಕಾಂತ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.