ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಧರ್ಮಾಚರಣೆಯಿಂದ ಸುಖ ಶಾಂತಿ ಪ್ರಾಪ್ತಿ’

ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಅಭಿಮತ
Published 27 ಜೂನ್ 2024, 4:45 IST
Last Updated 27 ಜೂನ್ 2024, 4:45 IST
ಅಕ್ಷರ ಗಾತ್ರ

ಚಿಂಚೋಳಿ: ‘ವಿಶ್ವ ಬಂಧುತ್ವದ ಅದ್ಭುತ ಸಂದೇಶ ನೀಡಿ ಸಾಮರಸ್ಯದ ಬದುಕಿಗೆ ಬೆಳಕು ತೋರಿದ ಶ್ರೇಯಸ್ಸು ಆದಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಮಠದಲ್ಲಿ ಆದಿ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

‘ಜೀವನದ ಉನ್ನತಿಗೆ ಧರ್ಮವೇ ದಿಕ್ಸೂಚಿ. ಧರ್ಮದ ಪಾಲನೆಯಿಂದ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ. ಧರ್ಮದ ಹಲವಾರು ಆಚರಣೆಗಳು ಬೇರೆ ಬೇರೆ ಆದರೂ, ಎಲ್ಲ ಧರ್ಮಗಳ ಗುರಿ‌ ಮಾನವ ಕಲ್ಯಾಣವೇ ಆಗಿದೆ. ರೇಣುಕಾಚಾರ್ಯರು ಜಾತಿ, ಮತ, ಪಂಥ ಗಡಿಮೀರಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದ್ದಾರೆ’ ಎಂದರು.

‘ಧಾರ್ಮಿಕ ಮೌಲ್ಯಗಳನ್ನು ಪುನರುತ್ಥಾನ ಮಾಡಿ ಸೌಹಾರ್ದ ಬದುಕಿಗೆ ನಾಂದಿ ಹಾಡಿದ್ದಾರೆ. ರೇಣುಕಾಚಾರ್ಯರ ಆದರ್ಶ ವಿಚಾರ ಮತ್ತು ತತ್ವ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗಿಗಳಾಗಿ ರೂಪುಗೊಳ್ಳಬೇಕು’ ಎಂದು ತಿಳಿಸಿದರು.

ಭರತನೂರಿನ ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ, ದೇಗಲಮಡಿಯ ಬಸವಲಿಂಗ ಅವಧೂತರು, ನಿಡಗುಂದಾ ಕರುಣೇಶ್ವರ ಶಿವಾಚಾರ್ಯರು ಮಾತನಾಡಿದರು.

ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಕೋಡ್ಲಿ ಬಸವಲಿಂಗ ಶಿವಾಚಾರ್ಯ, ಹೊಸಳ್ಳಿಯ ಸಿದ್ಧಲಿಂಗ ಶಿವಾಚಾರ್ಯ ಸಮ್ಮುಖವಹಿಸಿದ್ದರು. ಉಮಾ ಪಾಟೀಲ, ಶರಣು ಪಾಟೀಲ‌ ಮೋತಕಪಳ್ಳಿ, ಅಜೀತ ಪಾಟೀಲ, ಜಗನ್ನಾಥ ಶೇರಿಕಾರ, ಅಲ್ಲಮಪ್ರಭು ಹುಲಿ, ರಾಚಯ್ಯ ಮಠಪತಿ, ಸಂತೋಷ ಗಡಂತಿ, ನೀಲಕಂಠ ಸೀಳಿನ್, ಸಂತೋಷ ಕಡಗದ, ರಾಜು ಸಾಲಿ, ಗುಂಡಯ್ಯ ಸ್ವಾಮಿ, ಮಹಾಂತಯ್ಯ ಮಠಪತಿ, ಕಾಶಿನಾಥ ಹಿರೇಮಠ ಹಾಜರಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ‌ ಸದಸ್ಯ ಗೌತಮ‌ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಐನಾಪುರ ಸಿದ್ದಲಿಂಗೇಶ್ವರ ಹಿರೇಮಠದ ಪಂಚಾಕ್ಷರಿ ದೇವರು ಪ್ರಾಸ್ತಾವಿಕ‌ ಮಾತನಾಡಿದರು. ಉಡುಪಿ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ನೀಲಾಂಬಿಕಾ ಸಂಗಮೇಶ ಸುಂಕದ ನಿರೂಪಿಸಿದರು. ಸಂತೋಷ ಗಡಂತಿ ವಂದಿಸಿದರು.

ಚಿಂಚೋಳಿಗೆ ಆಗಮಿಸಿದ ರಂಭಾಪುರಿ ವೀರಸೋಮೇಶ್ವರ ಭಗವತ್ಪಾದರಿಗೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT