‘ಜೂನ್‌ನಲ್ಲೇ ಬರ ವರದಿ ಸಲ್ಲಿಸಬೇಕಿತ್ತು’
‘ಮುಂಗಾರು ಮಳೆಯು ಜೂನ್‌ನಲ್ಲಿ ಅರ್ಧದಷ್ಟು ಕೈಕೊಟ್ಟು ಜುಲೈ ತಿಂಗಳಲ್ಲಿಯೂ ಬರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಜೂನ್ ತಿಂಗಳಲ್ಲೇ ಬರ ಪರಿಹಾರದ ವರದಿ ಸಲ್ಲಿಸಬೇಕಿತ್ತು’ ಎಂದು ರಾಧಾ ಮೋಹನ್ ಅಗರವಾಲ್ ಹೇಳಿದರು. ‘ರಾಜ್ಯ ಸರ್ಕಾರವು ಬರಗಾಲದ ಅಂಕಿ ಅಂಶಗಳ ವಿವರವಾದ ವರದಿ ನೀಡಲಿಲ್ಲ. ಈಗ ಬರಗಾಲ ಮತ್ತು ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರವು ರೈತರಿಗೆ ನೀಡುತ್ತಿದ್ದ ₹4000 ಕಿಸಾನ್ ಸಮ್ಮಾನ ನಿಧಿ ನಿಲ್ಲಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.