ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ಕ್ಕೂ ಅಧಿಕ ಜನರಿಂದ ರಕ್ತದಾನ ಶಿಬಿರ

Last Updated 26 ಜನವರಿ 2023, 16:20 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಮಕ್ತಂಪುರ ಬಡಾವಣೆಯ ಗದ್ದುಗೆ ಮಠದಲ್ಲಿ ವಿಜಯ ಮಹಾಂತ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜಿ–99, ನಾಲ್ಕುಚಕ್ರ ತಂಡ ಹಾಗೂ ಸ್ಪಂದನಾ ಮಹಿಳಾ ತಂಡದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ಮೃತ್ಯುಂಜಯ ಸ್ವಾಮಿಗಳು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ‘ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ರಕ್ತದಾನ ಮಾಡುವ ಮೂಲಕ ಇದೊಂದು ಐತಿಹಾಸಿಕ ಯಶಸ್ವಿ ರಕ್ತದಾನ ಶಿಬಿರವಾಗಿದೆ’ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾಡಿಯಾಳ ಒಪ್ಪತ್ತೇಶ್ವರ ಮಠದ ಮರುಳಸಿದ್ದ ಸ್ವಾಮೀಜಿ, ಅಕ್ಕಲಕೋಟದ ಚನ್ನಬಸವ ದೇವರು, ಮೃತ್ಯುಂಜಯ ಸ್ವಾಮೀಜಿ, ಮಾದನ ಹಿಪ್ಪರಗಾದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ, ಸಿದ್ದಲಿಂಗೇಶ್ವರ ಸ್ವಾಮೀಜಿ, ಉತ್ಸವ ಸಮಿತಿ ಚರಪಟ್ಟಾಭಿಷೆಕ ಅಧ್ಯಕ್ಷ ಶಿವಶಂಕರಪ್ಪ ಎಸ್. ಹೊಸಗೌಡರು, ಕಾರ್ಯದರ್ಶಿ ಶರಣು ಎಸ್. ಗೊಬ್ಬುರ್, ಉದ್ಯಮಿ ರವೀಂದ್ರ ಬೆಕನಾಳ್, ಜಿ–99 ವ್ಯವಸ್ಥಾಪಕ ಶರಣು ಪಪ್ಪಾ, ನಾಲ್ಕುಚಕ್ರ ಮುಖ್ಯಸ್ಥೆ ಮಾಲಾ ಕಣ್ಣಿ, ಮಾಲಾ ದಣ್ಣೂರ, ಸ್ಪಂದನಾ ಮಹಿಳಾ ತಂಡದ ಅಧ್ಯಕ್ಷೆ ಲತಾ ಬಿಲಗುಂದಿ, ಬಸವೇಶ್ವರ ಆಸ್ಪತ್ರೆ ಬ್ಲಡ್ ಬ್ಯಾಂಕ್ ವಿಭಾಗದ ಡಾ.ವಿದ್ಯಾ, ಆಸ್ಪತ್ರೆ ಸಿಬ್ಬಂದಿವರ್ಗ ಮತ್ತು ಜೀವನಧಾರಾ ಬ್ಲಡ್ ಬ್ಯಾಂಕ್ ಸಿಬ್ಬಂದಿ ಹಾಗೂ ಬಡಾವಣೆಯ ಮಹಿಳೆಯರು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT