ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಬಾದ್: 47 ಜನರಿಂದ ರಕ್ತದಾನ

Published 22 ಜೂನ್ 2024, 14:27 IST
Last Updated 22 ಜೂನ್ 2024, 14:27 IST
ಅಕ್ಷರ ಗಾತ್ರ

ಶಹಾಬಾದ್: ‘ಪ್ರತಿವರ್ಷ ಮಹೇಶ್ವರಿ ಪ್ರಗತಿ ಮಂಡಲದಿಂದ ಧಾರ್ಮಿಕ, ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಾಡುವುದರ ಜೊತೆಗೆ ಈ ವರ್ಷ ರಕ್ತದಾನ ಶಿಬಿರ  ಆಯೋಜಿಸಲಾಗಿದೆ. ಒಟ್ಟು 47 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದಾರೆ’ ಎಂದು ಮಂಡಲ ಅಧ್ಯಕ್ಷ ಮನೋಜಕುಮಾರ್ ಮಂತ್ರಿ, ಉಪಾಧ್ಯಕ್ಷ ಸತೀಶ್ ರಾಠಿ ಹೇಳಿದರು.

ನಗರದ ಮಹೇಶ್ವರಿ ಪ್ರಗತಿ ಮಂಡಲ ಹಾಗೂ ಬಸವೇಶ್ವರ ಆಸ್ಪತ್ರೆಯ ಸಹಯೋಗದೊಂದಿಗೆ ಶನಿವಾರ ನಗರದ ಶ್ರೀಬಾಲಾಜಿ ಸಭಾಗೃಹದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಸವೇಶ್ವರರ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಮಹಿಳಾ ಮಂಡಲದ ಅಧ್ಯಕ್ಷೆ ವರ್ಷಾ ಪ್ರಕಾಶ ಸಾರಡ, ಮನೋಜ.ಬಿ ಮಂತ್ರಿ, ರಾಮನಿವಾಸ ಮಂತ್ರಿ, ರಾಜಗೋಪಾಲ್ ಮಂತ್ರಿ, ವಿಜಯಕುಮಾರ ರಾಠಿ, ಸೂರಜ ಪ್ರಕಾಶ ರಾಠಿ, ಭಾಗ್ಯಶ್ರೀ ಮಂತ್ರಿ ಶಾಂತ ಮಂತ್ರಿ ಸೇರಿದಂತೆ ಮಂಡಳಿಯ ಸದಸ್ಯರು ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT