ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೂಪಾಕ್ಷಯ್ಯ ತಾತನವರ ಪುಣ್ಯಸ್ಮರಣೋತ್ಸವ ಇಂದು

Published 19 ಜೂನ್ 2024, 16:20 IST
Last Updated 19 ಜೂನ್ 2024, 16:20 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಐನೋಳ್ಳಿ ಗ್ರಾಮದ ವಿರೂಪಾಕ್ಷಯ್ಯ ತಾತನವರ ಪುಣ್ಯಸ್ಮರಣೋತ್ಸವ ಗುರುವಾರ ಮತ್ತು ಶುಕ್ರವಾರ ನಡೆಯಲಿದೆ ಎಂದು ಸದ್ಭಕ್ತ ಮಂಡಳಿಯ ಮುಖಂಡ ರಾಮಯ್ಯಸ್ವಾಮಿ ಐನೋಳ್ಳಿ ತಿಳಿಸಿದ್ದಾರೆ.

ಗುರುವಾರ ರಾತ್ರಿ ಚಿಂಚೋಳಿ ತಾಲ್ಲೂಕು ಗಾನಯೋಗಿ ಪಂಚಾಕ್ಷರಿ ಕಲಾ ಸಂಘದ ಕಲಾವಿದರಿಂದ ಇಡೀ ರಾತ್ರಿ ಭಜನೆ, ಜಾಗರಣೆ ಶುಕ್ರವಾರ ಬೆಳಿಗ್ಗೆ ರುದ್ರಪೂಜೆ, ಬಿಲ್ವಾರ್ಚನೆ ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾತನವರ ಆಶ್ರಮದಲ್ಲಿ ಪೂಜ್ಯರ ಗದ್ದುಗೆ ಮೇಲೆ ದೇವಾಲಯ ನಿರ್ಮಿಸಲಾಗಿದೆ. ನಿತ್ಯ ಪೂಜೆ ಕೈಂಕರ್ಯಗಳು ನಡೆಯುತ್ತಿದ್ದು, ದೇವಾಲಯದ ಎದುರಿನ ಜಾಗದಲ್ಲಿ ಐನೋಳ್ಳಿ ಗ್ರಾಮಸ್ಥರು ಹಾಗೂ ವಿರೂಪಾಕ್ಷಯ್ಯ ತಾತನವರ ಭಕ್ತರಿಂದ ಪಡೆದ ದೇಣಿಗೆಯಲ್ಲಿ ಮಂಟಪ ನಿರ್ಮಿಸಿ ಕಟ್ಟಡ ವಿಸ್ತರಿಸಲಾಗಿದೆ. ಭಕ್ತರು ವಿರೂಪಕ್ಷಯ್ಯ ತಾತನವರ ಮೇಲೆ ವಿಶೇಷ ಭಕ್ತಿ ಹೊಂದಿದ್ದು, ಪ್ರತಿವರ್ಷ ಸಹಕಾರ ನೀಡುತ್ತ ಬಂದಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT