ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಬಸವೇಶ್ವರ ರಥೋತ್ಸವ

ಮುಲ್ಲಾಮಾರಿ ದಡದ ಪ್ರಕೃತಿ ಸೊಬಗಿನಲ್ಲಿ ಸಂಭ್ರಮದ ಜಾತ್ರೆ
Last Updated 5 ಮೇ 2022, 2:58 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ ಬುಧವಾರ ಸಂಜೆ ಜರುಗಿತು.

ಪಲ್ಲಕ್ಕಿ ಮೆರವಣಿಗೆ ಜತೆಗೆ ಕುಂಭ ಹೊತ್ತು ಗ್ರಾಮದ ಮುಖ್ಯ ಬೀದಿ ಮೂಲಕ ದೇವಾಲಯ ಎದುರಿನ ಮುಲ್ಲಾಮಾರಿ ನದಿಗೆ ಬಂದು ತಲುಪಿತು. ಪಲ್ಲಕ್ಕಿ 5 ಸುತ್ತು ಹಾಕಿ ಪಟಾಕಿ ಸಿಡಿಸಿದ ನಂತರ ಸಂಜೆ 7 ಗಂಟೆಗೆ ರಥೋತ್ಸವ ಜರುಗಿತು.

5 ದಿನ ಪಲ್ಲಕ್ಕಿ ಮೆರವಣಿಗೆ ನಡೆಸಿದ ಭಕ್ತರು, ಬುಧವಾರ ಬೆಳಿಗ್ಗೆ ಉಚ್ಚಾಯಿ ಮೆರವಣಿಗೆ ನಡೆಸಿ ಕೆಂಡ ಕಾಯ್ದು ಹರಕೆ ತೀರಿಸಿದರು. ಸಂಜೆಗೆ ಧಾರ್ಮಿಕ ಕೈಂಕರ್ಯ ಪೂರೈಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರಗಿತು.

ಬಸವರಾಜ ದೇಶಮುಖ್, ವೀರಭದ್ರಪ್ಪ ಮಲಕೂಡ, ಸಂಗನಬಸಯ್ಯ ಮಠ, ಚಂದ್ರಶೇಖರ ಗುತ್ತೇದಾರ, ವೀರಶೆಟ್ಟಿ ಮಗಿ, ಸೋಮಯ್ಯಸ್ವಾಮಿ, ಅಣ್ಣು ಪಾಟೀಲ, ಬಸವಂತಪ್ಪ ಮಾಳಗಿ, ಗಂಗಾಧರ ಕುಲಕರ್ಣಿ, ಬಸಂತ ಚೆಂದಿ, ಗುರುಪ್ರಸಾದ ಅಂಬಲಗಿ, ಲಕ್ಷ್ಮಣ ಭೋವಿ, ಹಣಮಂತ ಗುತ್ತೇದಾರ, ಸಂಗಪ್ಪ ಚಿಂಚೋಳಿ, ಮರೆಪ್ಪ ಬುಳ್ಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT