ಭಾನುವಾರ, ಅಕ್ಟೋಬರ್ 24, 2021
29 °C

ಸುಬ್ರಮಣಿಯನ್ ಸ್ವಾಮಿ ಚಿಂತಕ, ಅವರ ಟ್ವೀಟ್‌ಗೆ ಪ್ರತಿಕ್ರಿಯಿಸುವುದಿಲ್ಲ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಸುಬ್ರಮಣಿಯನ್ ಸ್ವಾಮಿ ಅವರೊಬ್ಬ ಸ್ವತಂತ್ರ ಚಿಂತಕ ಎಂದು ಹೇಳಿದ್ದೇನೆ. ಅದು ಟೀಕೆಯಲ್ಲ. ನನ್ನ ಹೇಳಿಕೆ ‌ಖಂಡಿಸಿ ಟ್ವೀಟ್ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ‌ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲವನ್ನು ಕೋರಿದ್ದೇವೆ. ನಮ್ಮ ಪ್ರಯತ್ನ ‌ಫಲಪ್ರದವಾಗಲಿದೆ’ ಎಂದು ‌ಭರವಸೆ ವ್ಯಕ್ತಪಡಿಸಿದರು.

‘ಅಧಿಕಾರಕ್ಕೆ ಬರುವಷ್ಟು ಅಗತ್ಯ ಬಲ ಬಿಜೆಪಿಗೆ ಬಂದಿಲ್ಲ. ಹೀಗಾಗಿ ನಾವು ಜೆಡಿಎಸ್ ವರಿಷ್ಠರೊಂದಿಗೆ ಮಾತನಾಡಿದ್ದೇವೆ. ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣಾ ಆಯೋಗ ಶೀಘ್ರ ದಿನಾಂಕ ಗೊತ್ತುಪಡಿಸಬಹುದು’ ಎಂದರು.

ಇದನ್ನೂ ಓದಿ... ಬೂಟು ನೆಕ್ಕುವ ರಾಜಕಾರಣ ನನ್ನದಲ್ಲ: ಬೊಮ್ಮಾಯಿಗೆ ಸುಬ್ರಮಣಿಯನ್‌ ಸ್ವಾಮಿ ತಿರುಗೇಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು