ಭಾನುವಾರ, ಮೇ 29, 2022
22 °C
ನಗರದಲ್ಲಿ ಪಥಸಂಚಲನ, ಮೋಂಬತ್ತಿ ಮೆರವಣಿಗೆ

ಪುಲ್ವಾಮಾ ಹುತಾತ್ಮರ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: 2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಗರದಲ್ಲಿ ಭಾನುವಾರ ವಿವಿಧ ಯುವ ಸಂಘಟನೆಗಳ ಮುಖಂಡರು ಪಂಥ ಸಂಚಲನ, ಮೇಣದಬತ್ತಿ ಮೆರವಣಿಗೆ ನಡೆಸಿದರು.

ನಗರದ ಜಗತ್‌ ವೃತ್ತದಿಂದ ಸರ್ದಾರ್‌ ವಲ್ಲಭಭಾಯ್ ಪಟೇಲ್‌ ವೃತ್ತದವರೆಗೆ ಶಾಂತಿ ಮೆರವಣಿಗೆ ನಡೆಸಿದ ಪ್ರೇರಣಾ ತಂಡದ ಸದಸ್ಯರು, ವೃತ್ತದಲ್ಲಿ ಯೋಧರಿಗೆ ಗೌರವ ಸಲ್ಲಿಸಿದರು.

ಸಂಘಟನೆ ಅಧ್ಯಕ್ಷೆ ರಕ್ಷಿತಾ ಲಾಡವಂತಿ, ಮುಖಂಡರಾದ ಮಹಾದೇವ ಚವ್ಹಾಣ, ಮಹೇಶ ಬಿದರ್‌ಕರ್‌, ಮಾಲಾ ದಣ್ಣೂರ, ಹರೀಶ ಹಾಲು, ರಾಹುಲ ಕುಲಕರ್ಣಿ, ಮಹಾದೇವ ಮಾದುಗೋಳಕರ್‌, ಪ್ರವೀಣ, ಶ್ವೇತಾ, ಸುಧಾಕರ್‌, ಮಹೇಶ, ಅಜಿತ್‌ ಜಾಧವ ನೇತೃತ್ವ ವಹಿಸಿದ್ದರು.

ಕೆಸರಟಗಿಯಲ್ಲಿ ಶ್ರದ್ಧಾಂಜಲಿ: ನಗರ ಹೊರವಲಯದ ಕೆಸರಟಗಿಯಲ್ಲಿ ಕಲ್ಯಾಣ ಕರ್ನಾಟಕ ಸೇನೆ ಹಾಗೂ ಕರ್ನಾಟಕ ಕಾರ್ಮಿಕ ಸೇನೆ ವತಿಯಿಂದ ಭಾನುವಾರ, ಪುಲ್ವಾಮಾ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎರಡು ನಿಮಿಷ ಮೌನಾಚರಣೆ ಮಾಡಿದ ಕೆಸರಟಗಿ ಗ್ರಾಮಸ್ಥರು ಹಾಗೂ ಸ್ಲಂ ಬೋರ್ಡ್‌ ಮನೆಗಳ ನಿವಾಸಿಗಳು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿದರು.

ಪ್ರಮುಖರಾದ ರಾಜಕುಮಾರ ಬಿ. ಸಿರನೂರ, ಬಸವರಾಜ, ಮಲ್ಲು ಕಟ್ಟಿಮನಿ, ಅಬ್ದುಲ್‌ ಜಾವೀದ್‌, ಜಾವೀದ್‌ ಖಾನ್, ಪರಜಾನಾ ಬೇಗಂ, ದತ್ತು ಹಯ್ಯಾಳಕರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು