ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಶಿಕ್ಷಕರಾಗಿದ್ದ ಲಿಂಗರಾಜ ಶಾಸ್ತ್ರಿ’

ಶರಣಬಸವ ವಿಶ್ವವಿದ್ಯಾಲಯದಿಂದ ಶ್ರದ್ಧಾಂಜಲಿ ಸಭೆ
Last Updated 22 ಸೆಪ್ಟೆಂಬರ್ 2021, 5:01 IST
ಅಕ್ಷರ ಗಾತ್ರ

ಕಲಬುರ್ಗಿ: ಈಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರಿ ಅವರಿಗೆ ವಿಶ್ವವಿದ್ಯಾಲಯ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಾಸ್ತ್ರಿ ಅವರ ಸಹಪಾಠಿ, ಶಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ಶಾಸ್ತ್ರಿಯವರು ವಿದ್ಯಾರ್ಥಿ ನಾಯಕರಾಗಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮ ಚಾಣಾಕ್ಷತೆ ಪ್ರದರ್ಶಿಸುತ್ತಿದ್ದರು. ಹಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮನ್ನುತಾವು ಶಿಕ್ಷಣತಜ್ಞರಾಗಿ ಪರಿವರ್ತಿಸಿಕೊಂಡಿದ್ದು ಅಚ್ಚರಿ. ಮುಂದೆ ಉತ್ತಮ ಶಿಕ್ಷಕರಾಗಿ ಅನೇಕರಮೆಚ್ಚುಗೆಯನ್ನು ಗಳಿಸಿದರು. ಅವರ ಅಕಾಲಿಕ ಮರಣದಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತುಶರಣಬಸವ ವಿಶ್ವವಿದ್ಯಾಲಯಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಿ. ನಿಷ್ಠಿ, ‘ಉತ್ತಮ ಆಡಳಿತಗಾರರಾಗಿದ್ದ ಶಾಸ್ತ್ರಿ ಅವರ ಸಾವಿನ ಸುದ್ದಿಯನ್ನು
ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರಿಗೆ ತಿಳಿಸಿದಾಗ ಅವರು ತೀವ್ರಅಘಾತ ವ್ಯಕ್ತಪಡಿಸಿದರು. ಶಾಸ್ತ್ರಿ ಅವರ ಮಕ್ಕಳನ್ನು ಸಂಘ ಮತ್ತು ವಿಶ್ವವಿದ್ಯಾಲಯ ನೋಡಿಕೊಳ್ಳಬೇಕೆಂದುಅಪ್ಪ ಅವರು ತಕ್ಷಣಕ್ಕೇ ಆದೇಶ ನೀಡಿದ್ದಾರೆ’ ಎಂದರು.

ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಸಮ ಕುಲಪತಿ ಪ್ರೊ.ವಿ.ಡಿ. ಮೈತ್ರಿ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ.ಕಿರಣ್ ಮಾಕಾ, ಡೀನ್ ಡಾ.ಬಸವರಾಜ ಮಠಪತಿ, ಇಂಗ್ಲಿಷ್‌ ವಿಭಾಗದ ಡೀನ್ ಡಾ.ಎಸ್.ಜಿ. ಡೊಳ್ಳೇಗೌಡರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT