ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಡುಗೆ ಅನಿಲ ಸೋರಿಕೆ: ಮನೆ ಭಸ್ಮ

Published 18 ಜನವರಿ 2024, 15:54 IST
Last Updated 18 ಜನವರಿ 2024, 15:54 IST
ಅಕ್ಷರ ಗಾತ್ರ

ಅಫಜಲಪುರ; ತಾಲೂಕಿನ ಅತನೂರು ಗ್ರಾಮದಲ್ಲಿ ಗುರುವಾರ ಅಡುಗೆ ಅನಿಲ ಸೋರಿಕೆಯಾಗಿ ಇಡೀ ಮನೆ ಸುಟ್ಟು ಸುಮಾರು ₹ 5 ಲಕ್ಷ ಹಾನಿಯಾದ ಬಗ್ಗೆ ವರದಿಯಾಗಿದೆ.

ಗ್ರಾಮದ ಮಂಗಳ ಬಾಯಿ ಪರಶುರಾಮ ಠಾಕೂರ ಅವರಿಗೆ ಸೇರಿದ ಮನೆಯಲ್ಲಿರುವ ಅಡುಗೆ ಸಾಮಾನುಗಳು, ದವಸ ಧಾನ್ಯಗಳು, ಚಿನ್ನದ ಒಡವೆ, ಮೋಟಾರ್ ಬೈಕ್, ನಗದು ಸುಟ್ಟಿವೆ. ಈ ಕುರಿತು  ಅಗ್ನಿಶಾಮಕ ಅಧಿಕಾರಿ ವಿಶ್ವನಾಥ್ ಕಾಮರೆಡ್ಡಿ‘ನಮ್ಮ ಅಗ್ನಿಶಾಮಕ ವಾಹನ ಹೋಗುವುದರ ಒಳಗಾಗಿ ಎಲ್ಲವೂ ಸುಟ್ಟು ಹೋಗಿದ್ದು ಸಾಕಷ್ಟು ಹಾನಿಯಾಗಿದೆ. ಟ್ರ್ಯಾಕ್ಟರ್ ಟ್ರಾಲಿ ಮಾರಿ ಮನೆಯಲ್ಲಿ ಹಣ ಇಟ್ಟಿದ್ದರು.  ₹ 1 ಲಕ್ಷ ನಗದು, 50 ಗ್ರಾಂ ಚಿನ್ನಇತ್ತು ಎಂದು ಅವರು ತಿಳಿಸಿದರು.

‘ಮನೆಯವರು ಅನಾಥರಾಗಿದ್ದಾರೆ. ಅವರಿಗೆ ತಕ್ಷಣ ತಾಲೂಕು ಆಡಳಿತ ವಂದನೆ ಮಾಡಿ ಅವರಿಗೆ ತಾತ್ಕಾಲಿಕ ವಾಸ ಮಾಡಲು ಶೆಡ್ಡು ನಿರ್ಮಿಸಿ ಕೊಡಬೇಕು. ಮತ್ತು ಪಡಿತರ ಆರಾಧನೆಯನ್ನು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಈ ಕುರಿತು ಶಾಸಕ ಎಂ. ವೈ. ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಅರುಣ್ ಕುಮಾರ್ ಪಾಟೀಲ್ ಮಾಹಿತಿ ನೀಡಿ, ‘ತಕ್ಷಣ ನೊಂದ ಕುಟುಂಬಕ್ಕೆ ₹ 11 ಸಾವಿರ ವೈಯಕ್ತಿಕ ಪರಿಹಾರ ನೀಡಲಾಗಿದೆ. ಮುಂದೆ ಸರ್ಕಾರದಿಂದ ಎಲ್ಲಾ ನೆರವು ಕುಟುಂಬಕ್ಕೆ ನೀಡಲಾಗುವುದು ಕುಟುಂಬಸ್ಥರು ಧೈರ್ಯವಾಗಿರಬೇಕು ಮತ್ತು ತಾತ್ಕಾಲಿಕವಾಗಿ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ ಅವುಗಳನ್ನ ಪೂರೈಸಲಾಗುವುದು’ ಎಂದು ತಿಳಿಸಿದರು.

ಸ್ಥಳಕ್ಕೆ ಕಂದಾಧಿಕಾರಿಗಳು ಗ್ರಾಮ ಲೆಕ್ಕಿಗರು ಭೇಟಿ ನೀಡಿ ವರದಿ ಮಾಡಿಕೊಂಡು ಹೋಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಸವರಾಜ ಪಾಟೀಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT