ಗುರುವಾರ , ಡಿಸೆಂಬರ್ 3, 2020
20 °C

ಯಡ್ರಾಮಿ: 70 ಎಕರೆ ಶೇಂಗಾ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ತಾಲ್ಲೂಕಿನಲ್ಲಿ ಈ ಬಾರಿ 70 ಎಕರೆ ಶೇಂಗಾ ಬಿತ್ತನೆ ಮಾಡಿದ್ದು, ಎಲ್ಲವೂ ಮಳೆಗೆ ನೀರು ಪಾಲಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕಡಕೋಳ ಗ್ರಾಮದಲ್ಲಿ ತೊಗರಿ, ಹತ್ತಿ, ಶೇಂಗಾ ಮತ್ತು ಕುಂಬಳಕಾಯಿ ಹಾನಿಯಾಗಿದೆ.

ಶೇಂಗಾ ಗಿಡಗಳು ಹೆಚ್ಚಿನ ತೇವಾಂಶದಿಂದ ಸಂಪೂರ್ಣ ನೆಲ ಕಚ್ಚಿವೆ. ಆರಂಭದಲ್ಲಿ ಹದ ಮಳೆಯಾಗಿದ್ದರಿಂದ ರೈತರು ಕೊರೊನಾ ವೈರಸ್ ಲೆಕ್ಕಿಸದೆ ಜೀವ ಪಣಕಿಟ್ಟು ಹೊಲವನ್ನು ಉಳುಮೆ ಮಾಡಿ ಬಿತ್ತಿದ್ದರು.

ಶೇಂಗಾ ಗಿಡಗಳು ಇದೀಗ ಮಳೆ ಸುರಿತ್ತಿರುವುದರಿಂದ ಕೆಂಪಾಗಿ ಹಾಳಾಗುತ್ತಿವೆ. ಇನ್ನು ಕುಂಬಳಕಾಯಿ ಬೆಳೆದ ಮಾಡಿದ ರೈತರ ಗೋಳು ಹೇಳತೀರದಾಗಿದೆ. ಬೆಳೆ ಬೆಳೆಯಲು ಮಾಡಿದ ಶ್ರಮ, ಖರ್ಚು  ಹಣ ನೀರಿನಲ್ಲಿ ಮಾಡಿದ ಹೋಮದಂತಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಬೆಳೆ ಹಾನಿಗೀಡಾದ ಗ್ರಾಮಗಳಿಗೆ ಭೇಟಿ ನೀಡದೆ ಇರುವುದಿಂದ ಹಾಗೂ ಬೆಳೆ ಹಾನಿ ಸಮೀಕ್ಷೆ ನಿಧಾನಗತಿಯಲ್ಲಿ ಸಾರುವುದರಿಂದ ಬೆಳೆ ಪರಿಹಾರ ಸಿಗುತ್ತೋ ಇಲ್ಲವೋ ಎಂಬ ಆತಂಕವನ್ನು ರೈತರಲ್ಲಿ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.