ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚಾ ಸ್ಪರ್ಧೆ; ವೀರೇಶ, ತ್ರಿವೇಣಿ ಪ್ರಥಮ

ಪ್ರಬಂಧ ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ: ವಿಜೇತರಿಗೆ ಬಹುಮಾನ ವಿತರಣೆ
Last Updated 7 ಫೆಬ್ರುವರಿ 2023, 13:52 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ, ವಿಶ್ವನಾಥರಡ್ಡಿ ಮುದ್ನಾಳ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಸಹಕಾರ ಕುರಿತು ಜಿಲ್ಲಾ ಮಟ್ಟದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪದವಿಪೂರ್ವ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ‘ಸಮೃದ್ಧ ಭಾರತ ನಿರ್ಮಾಣದಲ್ಲಿ ಸಹಕಾರ ಚಳವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲದು’ ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆ ನಡೆಯಿತು.

ಪರ ಚರ್ಚೆಯಲ್ಲಿ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವೀರೇಶ ರವಿಶಂಕರ (ಪ್ರಥಮ), ಕಲಬುರಗಿಯ ಶರಣಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಮಂಜುನಾಥ ಎಂ.ಅಷ್ಟಗಿ (ದ್ವಿತೀಯ) ಸ್ಥಾನ ಪಡೆದರು. ವಿರೋಧ ಚರ್ಚೆಯಲ್ಲಿ ದೊಡ್ಡಪ್ಪ ಅಪ್ಪ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ತ್ರೀವೇಣಿ ಕುಂಬಾರ (ಪ್ರಥಮ), ಸುಲೇಪೇಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಸಾಗರ ಸಂಜೀವಕುಮಾರ (ದ್ವಿತೀಯ) ಸ್ಥಾನ ಪಡೆದರು.

ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ‘ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು, ಸಂಭವನೀಯ ಪರಿಹಾರಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಸ್ಪಧೆಯಲ್ಲಿ ಆದರ್ಶ ನಗರದ ಕೆಸಿಇಡಿಟಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಪೂರ್ಣಿಮಾ ವಿ.ಜೋಶಿ (ಪ್ರಥಮ), ಗೌರಿ ಎಂ.ಬಳಿ (ದ್ವಿತೀಯ), ಗಿರಿಜಾ ಶಿವಕುಮಾರ (ತೃತೀಯ) ಸ್ಥಾನ ಪಡೆದರು.

ವಿಜೇತ ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷೆ ವರಲಕ್ಷ್ಮಿ ಆರ್.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚಂದ್ರಶೇಖರ ತಳ್ಳಳ್ಳಿ, ವಿಶ್ವನಾಥರೆಡ್ಡಿ ಮುದ್ನಾಳ ಕಾಲೇಜಿನ ಆಡಳಿತಾಧಿಕಾರಿ ಬಸವರಾಜ ಮಠಪತಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಎಸ್‌.ಎಸ್‌.ಬರ್ಮಾ, ಉಪನ್ಯಾಸಕಿ ಉಷಾರಡ್ಡಿ, ನಿವೃತ್ತ ಉಪಪ್ರಾಂಶುಪಾಲ ಎಂ.ಬಿ.ಬಳಿಗೇರಿ, ವಿ.ಜಿ.ಅಕ್ಕಾ ಇದ್ದರು.

ಶೈಲಜಾ ಆರ್‌.ಚವ್ಹಾಣ ಸ್ವಾಗತಿಸಿದರು. ಚಂದ್ರಶೇಖರ ಹಾವೇರಿ ನಿರೂಪಿಸಿದರು. ಪೀರಪ್ಪ ಕಣಮೇಶ್ವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT