ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಟೂರ ಶಿಕ್ಷಕರ ಸೂಕ್ತ ಪ್ರತಿನಿಧಿ: ಡಾ.ಶರಣಪ್ರಕಾಶ

Last Updated 24 ಅಕ್ಟೋಬರ್ 2020, 16:58 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರತಿಯೊಬ್ಬ ಶಿಕ್ಷಕ– ಉಪನ್ಯಾಸಕರೊಂದಿಗೆ ನೇರ ಸಂಪರ್ಕ ಹಾಗೂ ಕಳೆದ ಆರು ವರ್ಷದಲ್ಲಿ ಬ್ರಷ್ಟಾಚಾರ ರಹಿತ ಆಡಳಿತ ನಡೆಸಿರುವ ಶರಣಪ್ಪ ಮಟ್ಟೂರ ಅವರು ನಿಜವಾದ ಶಿಕ್ಷಕರ ಪ್ರತಿನಿಧಿ ಆಗಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಮತಯಾಚಿಸಿ ಮಾತನಾಡಿದ ಅವರು, ‘ಮಟ್ಟೂರ ಅವರು ಕಳೆದ ಆರು ವರ್ಷಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಶಿಕ್ಷಕರ ಬೇಡಿಕೆಗಳಿಗೆ ಒತ್ತಾಯಿಸಿ ಈ ಹಿಂದೆ ಸಿದ್ದರಾಮಯ್ಯ ಸಿ.ಎಂ ಆಗಿದ್ದಾಗ ಸರ್ಕಾರದ ವಿರುದ್ಧವೇ ಧರಣಿ ನಡೆಸಿದ್ದರು. ಇದನ್ನು ನೋಡಿದರೆ ಶಿಕ್ಷಕರು ಮಟ್ಟೂರ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.

‘1980ರ ಅವಧಿಯಿಂದಲೂ ಬಗೆಹರಿಯದ ಅನುದಾನಿತ ಶಿಕ್ಷಕರ ಕಾಲ್ಪನಿಕ ವೇತನ ಕುರಿತಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಸೇರಿದಂತೆ ಇತರ ಹತ್ತಾರು ನಿಟ್ಟಿನಲ್ಲಿ ಸ್ಪಂದಿಸಿದ್ದಾರೆ. ಉಪನ್ಯಾಸಕರ ಬಡ್ತಿ ಸೇರಿದಂತೆ ಇತರ ಸಮಸ್ಯೆ ಗಳನ್ನು ಬಗೆಹರಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಆದ್ದರಿಂದ ಯಾವುದೇ ವಿಷಯಗಳತ್ತ ಗಮನ ಕೊಡದೇ ಮಟ್ಟೂರ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತಗಳ ಮೂಲಕ ಆಯ್ಕೆಗೊಳಿಸಬೇಕು’ ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.‌ಚಂದ್ರಶೇಖರ ಪಾಟೀಲ ಮಾತನಾಡಿ, ‘ಪ್ರತಿಯೊಬ್ಬ ಶಿಕ್ಷಕರ ಸಮಸ್ಯೆಗಳನ್ನು ಆಲಿಸಬೇಕು ಹಾಗೂ ಅವುಗಳಿಗೆ ಸ್ಪಂದಿಸಬೇಕೆಂಬ ಏಕೈಕ ಬದ್ಧತೆ ಹೊಂದಿರುವ ಮಟ್ಟೂರ ಅವರನ್ನು ಗೆಲ್ಲಿಸಿದಲ್ಲಿ ಮಾತ್ರ ಶಿಕ್ಷಕರ ಇತರ ಸಮಸ್ಯೆಗಳಿಗೆ ಪಡೆದ ಪರಿವಾರವಾಗಲು ಸಾಧ್ಯ’ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಎಂಆರ್‌ಎಂಸಿ ಕಾಲೇಜಿನ ಡೀನ್ ಡಾ.ಉಮೇಶಚಂದ್ರ, ಡಾ.ಕಿರಣ ದೇಶಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT