ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ: ಚಿಂಚೋಳಿಯಲ್ಲಿ ಘಟನೆ

ಕಲಬುರಗಿ ಜಿಲ್ಲೆಯ ಗಡಿಗ್ರಾಮ ಕುಂಚಾವರಂ ಬಳಿ ದುರಂತ
Published 18 ಜೂನ್ 2023, 10:44 IST
Last Updated 18 ಜೂನ್ 2023, 10:44 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ಪ್ರಕರಣದಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಗಡಿಗ್ರಾಮ ಕುಂಚಾವರಂ ಬಳಿ ಭಾನುವಾರ ನಡೆದಿದೆ.

ಕುಂಚಾವರಂ ಗ್ರಾಮದ ಹಣಮಂತ ಸಂಜಪ್ಪ ವಡ್ಡರ್ (40) ಮಗ ಓಂಕಾರ(9) ಹಾಗೂ ಮಗಳು ಅಕ್ಷರಾ (6) ಮೃತ ದುರ್ದೈವಿಗಳು.

ಕುಂಚಾವರಂ ನಿವಾಸಿಯಾಗಿದ್ದ ಹಣಮಂತ ಕೆಲ ವರ್ಷದ ಹಿಂದೆ ತೆಲಂಗಾಣದ ತಾಂಡೂರಿನಲ್ಲಿ‌ ಮನೆ ಕಟ್ಟಿಕೊಂಡು ಅಲ್ಲಿಯೇ ನೆಲೆಸಿದ್ದರು. ಈಚೆಗೆ ಹೈದರಾಬಾದ್‌ ಗೆ ತೆರಳಿದ್ದ ಹಣಮಂತ ಮಕ್ಕಳೊಂದಿಗೆ ಕುಂಚಾವರಂಗೆ ಬಂದಿದ್ದಾರೆ. ಶುಕ್ರವಾರ ತನ್ನ ಸಹೋದರ ಗ್ರಾ.ಪಂ. ಸದಸ್ಯ ಗೋಪಾಲ ಎಂಬುವವರಿಗೆ ಕರೆ ಮಾಡಿ, ನಾನು ಮಕ್ಕಳೊಂದಿಗೆ ಬಾವಿದ್ದು ಬಿದ್ದು ಸಾಯುತ್ತಿದ್ದೇನೆ. ನನ್ನ ಶವ ತೆಗೆದು ಅಂತ್ಯಕ್ರಿಯೆ ನಡೆಸುವಂತೆ ಕೋರಿಕೊಂಡಿದ್ದಾನೆ. ಆಗ ಗೋಪಾಲನು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕರ್ನಾಟಕ ಮತ್ತು ತೆಲಂಗಾಣ ಪೊಲೀಸರು, ಅಗ್ನಿಶಾಮಕ ಠಾಣೆಯವರು ಹುಡುಕಿದರೂ ಪತ್ತೆಯಾಗಿಲ್ಲ. ಭಾನುವಾರ ಕುಂಚಾವರಂ ಬಳಿಯ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಮೂವರ ಶವ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕುಂಚಾವರಂ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶವ ಹೊರ ತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT