ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಸಂಬಂಧಿಕರಿಗೆ ಉಚಿತ ಊಟ

ದಿ.ಚಂದ್ರಶೇಖರ ಪಾಟೀಲ ಫೌಂಡೇಷನ್‌ನಿಂದ ನಿರಂತರ ಅನ್ನಸಂತರ್ಪಣೆ
Last Updated 8 ಮೇ 2021, 5:22 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕಿತರ ಜತೆಗೆ ಆರೈಕೆಗಾಗಿ ಬರುವ ಜನರಿಗಾಗಿ ಉಚಿತವಾಗಿ ಊಟ ನೀಡಲು ಇಲ್ಲಿನ ಚಂದ್ರಶೇಖರ ಪಾಟೀಲ ಫೌಂಡೇಷನ್‌ ಮುಂದಾಗಿದೆ. ಪ್ರತಿ ದಿನ 500 ಬಿಸಿ ಊಟದ ಪೊಟ್ಟಣಗಳನ್ನು ಜಿಮ್ಸ್‌, ಇಎಸ್‌ಐಸಿ ಹಾಗೂ ಬಸವೇಶ್ವರ ಆಸ್ಪತ್ರೆ ಆವರಣದಲ್ಲಿನ ಜನರಿಗೆ ನೀಡಲಾಗುತ್ತಿದೆ.

ಈ ಸೇವೆಗೆ ಶುಕ್ರವಾರ ಚಾಲನೆ ನೀಡಿದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ‘ಕೊರೊನಾ ಸೋಂಕಿತರೊಂದಿಗೆ ಅವರ ಸಂಬಂಧಿಕರು, ಕುಟುಂಬದವರು ಕೂಡ ಬಂದಿರುತ್ತಾರೆ. ಲಾಕ್‌ಡೌನ್‌ ಕಾರಣ ಅವರಿಗೆ ಎಲ್ಲಿಯೂ ಊಟ, ಉಪಾಹಾರ ಸಿಗುತ್ತಿಲ್ಲ. ಆಸ್ಪತ್ರೆಯ ಒಳಗೆ ರೋಗಿಗಳಿಗೆ ಸರ್ಕಾರ ಊಟ ನೀಡುತ್ತಿದೆ. ಆದರೆ, ಹೊರಗಡೆಯ ಜನ ಉಪವಾಸದಿಂದ ಬಳಲುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ಫೌಂಡೇಷನ್‌ನಿಂದ ಊಟ ಪೂರೈಸಲಾಗುತ್ತಿದೆ’ ಎಂದರು.‌

‘ಸದ್ಯಕ್ಕೆ ಪ್ರತಿದಿನ 500 ಊಟ ಪೂರೈಸಲಾಗುತ್ತಿದೆ. ಜನರ ಪ್ರತಿಕ್ರಿಯೆ ನೋಡಿ ಇದನ್ನು 1000ಕ್ಕೆ ಏರಿಸಲಾಗುವುದು. ಪ್ರತಿ ಪೊಟ್ಟಣದಲ್ಲೂ ಎರಡು ಚಪಾತಿ, ಪಲ್ಯ, ಅನ್ನ, ಸಾರು, ಬಾಳೆಹಣ್ಣು ಹಾಗೂ ನೀರಿನ ಬಾಟಲಿ ಇರುತ್ತದೆ’ ಎಂದರು.

‘ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಎಲ್ಲ ಧರ್ಮ, ಸಮಾಜದ ಜನರೂ ಇಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದರು.

ಫೌಂಡೇಷನ್ ಅಧ್ಯಕ್ಷರೂ ಆದ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ಹಾದಿಮನಿ, ಪ್ರಮುಖರಾದ ಸೂರಜ್‍ಪ್ರಸಾದ್‌ ತಿವಾರಿ ಮತ್ತು ಶರಣು ರಡ್ಡಿ, ಮಹಾದೇವ ಬೆಳಮಗಿ, ಆರತಿ ತಿವಾರಿ, ಸಂಗಮೇಶ ರಾಜೋಳಿ, ಶರಣಬಸ್ಪಪ ಹೀರಾ, ರೇಷ್ಮಿ, ಶ್ರೀನಿವಾಸ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT