4

ರೈತರ ಖಾಸಗಿ ಸಾಲವನ್ನು ಸರ್ಕಾರ ಭರಿಸಲಿ: ಮಾನ್ಪಡೆ

Published:
Updated:
ಮಾರುತಿ ಮಾನ್ಪಡೆ 

ಕಲಬುರ್ಗಿ: ‘ರಾಜ್ಯದ ರೈತರ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾದ ಜತೆಗೆ ರೈತರು ಖಾಸಗಿಯಾಗಿ ಮಾಡಿರುವ ಸಾಲವನ್ನೂ ಸರ್ಕಾರ ಭರಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಒತ್ತಾಯಿಸಿದರು.

‘ಸಾಲ ಮನ್ನಾವನ್ನು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೀಮಿತಗೊಳಿಸಿದರೆ ಸಾಲದು. ರೈತರು ಹೆಚ್ಚಿನ ಬಡ್ಡಿ ದರದಲ್ಲಿ ಖಾಸಗಿಯಾಗಿ ಸಾಲ ಮಾಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಬಗ್ಗೆಯೂ ಗಮನ ಹರಿಸಬೇಕು. ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕೃಷಿಗೆ ಬೆಂಬಲ ಬೆಲೆ ನಿಗದಿಪಡಿಸಲು ಕಾನೂನು ರಚಿಸಬೇಕು. ಈ ಬಗ್ಗೆ ಜುಲೈ 5ರ ಬಜೆಟ್‌ನಲ್ಲಿ ಘೋಷಿಸಬೇಕು. ಬೆಳೆ ವಿಮೆ ಯೋಜನೆಯಿಂದ ರೈತರಿಗಿಂತ ಹೆಚ್ಚಾಗಿ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದೆ. ಆದ್ದರಿಂದ ಎಲ್‌ಐಸಿ ಮಾದರಿಯಲ್ಲಿ ಬೆಳೆ ವಿಮೆ ಜಾರಿಗೆ ತರಬೇಕು. ಕಳೆದ ವರ್ಷ ಜಿಲ್ಲೆಯಲ್ಲಿ 50ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದರು. ಆ ಪೈಕಿ ಇನ್ನೂ 11ಸಾವಿರ ರೈತರಿಗೆ ವಿಮೆ ಹಣ ಸಿಕ್ಕಿಲ್ಲ. ಹೀಗಾದರೆ ಹಣ ಪಾವತಿಸಿದ ರೈತರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ಕೃಷಿ ಬಿಕ್ಕಟ್ಟು ರಾಜ್ಯದ ಸಮಸ್ಯೆ ಮಾತ್ರವಲ್ಲ, ದೇಶದ ಸಮಸ್ಯೆಯೂ ಹೌದು. ರಾಜ್ಯದ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದಿಂದ ಶೇ 50ರಷ್ಟು ನೆರವು ಪಡೆಯಬೇಕು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು. ಮುಖಂಡ ಅಶೋಕ ಮ್ಯಾಗೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !