ಸೋಮವಾರ, 9 ಮಾರ್ಚ್ 2026
×
ADVERTISEMENT

ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ; ಅದ್ದೂರಿ ಮೆರವಣಿಗೆ, ಸಾವಿರಾರು ಜನರು ಭಾಗಿ

Published : 16 ಫೆಬ್ರುವರಿ 2026, 5:14 IST
Last Updated : 16 ಫೆಬ್ರುವರಿ 2026, 5:14 IST
ADVERTISEMENT
ಫಾಲೋ ಮಾಡಿ
Comments
ಸಂತ ಸೇವಾಲಾಲರ ಜಯಂತಿ ಅಂಗವಾಗಿ ಕಲಬುರಗಿಯಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು –ಪ್ರಜಾವಾಣಿ ಚಿತ್ರ
ಸಂತ ಸೇವಾಲಾಲರ ಜಯಂತಿ ಅಂಗವಾಗಿ ಕಲಬುರಗಿಯಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು –ಪ್ರಜಾವಾಣಿ ಚಿತ್ರ
ಸಮಾನತೆಗೆ ಶ್ರಮಿಸಿದ ಸಂತ ಸೇವಾಲಾಲರು ಸೂರಗೊಂಡನಕೊಪ್ಪದಲ್ಲಿ ಜನಿಸಿದರು. ಇಡೀ‌ ಜೀವನದ ಉದ್ದಕ್ಕೂ ಗೋವು ರಕ್ಷಣೆಗೆ ಶ್ರಮಿಸಿದರು. ಅಹಿಂಸೆ ಭಕ್ತಿ ಮುಕ್ತಿ ಮಾರ್ಗ ತೋರಿದರು
ಬಸವರಾಜ ಮತ್ತಿಮಡು ಶಾಸಕ‌
‘ಮೊದಲ ಆದ್ಯತೆ ಸಮಾಜವೇ ಆಗಲಿ’
ಬಳಿಕ ಮಾತನಾಡಿದ ಶಾಸಕ‌ ಅವಿನಾಶ ಜಾಧವ ‘ಹಿಂದೆಲ್ಲ ಬಿಜೆಪಿ ಕಾಂಗ್ರೆಸ್‌ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದವರಿದ್ದರೂ ಪಕ್ಷಭೇದ ಮರೆತು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ಆದರೆ ಇತ್ತೀಚೆಗೆ ರಾಜಕಾರಣ ಮೊದಲ ಆದ್ಯತೆ ಆಗುತ್ತಿದೆ. ಸಮಾಜ ಎರಡನೇ ಆದ್ಯತೆ ಆಗಿಬಿಟ್ಟಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಸಮಾಜ ಅಭಿವೃದ್ಧಿ ಆಗಬೇಕಾದರೆ ಯಾವುದೇ ಪಕ್ಷಗಳ ಭೇದ ಹಿರಿಯರು–ಕಿರಿಯರು ‌ಎಂಬ ಭೇಧ ಮರೆತು ಒಗ್ಗೂಡಬೇಕು.‌ ಭವಿಷ್ಯದಲ್ಲಿ ಸಮಾಜಕ್ಕೆ ಮೊದಲ ಆದ್ಯತೆ ಹಾಗೂ ರಾಜಕಾರಣಕ್ಕೆ ಎರಡನೇ ಆದ್ಯತೆ ಕೊಟ್ಟು ನಡೆಯಬೇಕಿದೆ. ಆಗ ಮಾತ್ರವೇ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಅಬ್ಬರದ ಡಿಜಿ ಸದ್ದು; ಅನ್ನಸಂತರ್ಪಣೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಲಬುರಗಿಯ ನಗರೇಶ್ವರ ಶಾಲೆಯಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ತನಕ ಸೇವಾಲಾಲರ ಚಿತ್ರ ಭವ್ಯ ಮೆರವಣಿಗೆ ನಡೆಯಿತು. ಸಮುದಾಯದ ಸಾವಿರಾರು ಮಂದಿ ಬಿಸಿಲೂ ಲೆಕ್ಕಿಸದೇ ಉತ್ಸಾಹದಿಂದ ಪಾಲ್ಗೊಂಡರು.  ಹಲವರು ಸಾಂಪ್ರದಾಯಿಕ ವೇಷತೊಟ್ಟು ಮೆರವಣಿಗೆ ಕಳೆ ಹೆಚ್ಚಿಸಿದರು. ವಿವಿಧ ವಾದ್ಯ ಮೇಳಗಳು ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದರು. ನಗರದ ವಿವಿಧೆಡೆಯಿಂದ ಸೇವಾಲಾಲ್‌ ಭಾವಚಿತ್ರದೊಂದಿಗೆ ಬಂದ ಮೆರವಣಿಗೆಗಳು ಮಧ್ಯಾಹ್ನದ ಹೊತ್ತಿಗೆ ಜಗತ್‌ ವೃತ್ತದಲ್ಲಿ ಸಂದಿಸಿದವು. ಇದರಿಂದ ಜಗತ್‌ನಿಂದ ರಂಗಮಂದಿರ ತನಕದ ಎರಡೂ ಮಾರ್ಗಗಳು ಜನರಿಂದ ತುಂಬಿ ತುಳುಕಿದವು. ಕಿವಿಗಡಚಿಕ್ಕುವ ಡಿಜೆ ಸದ್ದಿಗೆ ಹೆಜ್ಜೆಹಾಕಿದ ಯುವಜನ ಕುಣಿದರು. ಸೇವಾಲಾಲ್‌ ಜಯಂತಿ ಅಂಗವಾಗಿ ನಗರದ ಅಲ್ಲಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT