ಗುಲಬರ್ಗಾ ವಿಮಾನ ನಿಲ್ದಾಣ: 19ರಂದು ಪ್ರಾಯೋಗಿಕ ಹಾರಾಟ

7

ಗುಲಬರ್ಗಾ ವಿಮಾನ ನಿಲ್ದಾಣ: 19ರಂದು ಪ್ರಾಯೋಗಿಕ ಹಾರಾಟ

Published:
Updated:
Deccan Herald

ಕಲಬುರ್ಗಿ: ಇಲ್ಲಿಯ ‘ಗುಲಬರ್ಗಾ ವಿಮಾನ ನಿಲ್ದಾಣ’ದ ರನ್‌ವೇ ಪರೀಕ್ಷೆಗಾಗಿ ಪ್ರಾಯೋಗಿಕ ವಿಮಾನ ಹಾರಾಟ ಆಗಸ್ಟ್‌ 19ರಂದು ನಡೆಯಲಿದೆ.

ಹೈದರಾಬಾದ್‌ ಮೂಲದ ಏಷಿಯಾ ಫೆಸಿಪಿಕ್‌ ಫ್ಲೈಟ್‌ ಟ್ರೈನಿಂಗ್‌ ಅಕಾಡೆಮಿಯವರು ಈ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಗಸ್ಟ್‌ 12ರಂದು ಪ್ರಾಯೋಗಿಕ ವಿಮಾನ ಹಾರಾಟಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಕೆಲ ತಾಂತ್ರಿಕ ಸೌಲಭ್ಯ ಕಲ್ಪಿಸಬೇಕಿರುವ ಕಾರಣ ಸಮಯಾವಕಾಶ ನೀಡುವಂತೆ ಸಂಸ್ಥೆ ಕೋರಿದೆ. ಅಂದು ರನ್‌ವೇ ಪರಿಶೀಲನೆಯಷ್ಟೇ ನಡೆಯಲಿದೆ. ಯಾವುದೇ ಸಭೆ–ಸಮಾರಂಭ ಇರುವುದಿಲ್ಲ ಎಂದರು.

‘ಕಲಬುರ್ಗಿಯಲ್ಲೇ ವಿಮಾನ ಹಾರಾಟ ತರಬೇತಿ ಕೇಂದ್ರ ಸ್ಥಾಪಿಸುವಂತೆ ಕೋರಲಾಗಿದೆ. ಇಲ್ಲಿ ಅದು ಸ್ಥಾಪನೆಯಾದರೆ ಸ್ಥಳೀಯರಿಗೆ ವಿಮಾನ ಫೈಲಟ್‌ ತರಬೇತಿ ಪಡೆಯಲು ಅನುಕೂಲವಾಗುತ್ತದೆ. ಅದರ ಜೊತೆಗೆ ರನ್‌ವೇ ನಿರ್ವಹಣೆ ಆಗುತ್ತದೆ. ಅಷ್ಟೇ ಅಲ್ಲ, ಆ ಸಂಸ್ಥೆ ನಿರ್ವಹಣಾ ವೆಚ್ಚವನ್ನೂ ಪಾವತಿಸುತ್ತದೆ’ ಎಂದು ಅವರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !