ಕಲಬುರಗಿ: ನಮಸ್ವಿ ಮಕ್ಕಳ ಕ್ಲಿನಿಕ್, ವಾಸ್ಕುಲರ್ ಕ್ಲಿನಿಕ್, ಮೋಲಾರ ಡೆಂಟಲ್ ಕ್ಲಿನಿಕ್, ಯುನಿಕೇರ್ ಡೈಗ್ನೋಸ್ಟಿಕ್ ಹಾಗೂ ಜಯನಗರ ಶಿವಮಂದಿರದ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಜಯನಗರ ಬಡಾವಣೆಯ ಶಿವಮಂದಿರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ಉಚಿತ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು.
ಶಿಬಿರ ಉದ್ಘಾಟಿಸಿದ ಹಿರಿಯ ವೈದ್ಯ ಡಾ.ಎಸ್.ಎಸ್.ಗುಬ್ಬಿ, ‘ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಬೇಕಾರೆ ಉತ್ತಮ ಆಹಾರ ಕ್ರಮದ ಕಡೆ ಗಮನ ಹರಿಸಬೇಕು. ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು‘ ಎಂದರು.
ನರರೋಗ ತಜ್ಞ ಡಾ.ಅನಿಲ್ ಪಾಟೀಲ, ಜಯನಗರ ಶಿವಮಂದಿರದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಪ್ಪ ಹುಡಗಿ, ವಿರೇಶ ದಂಡೋತಿ ವೇದಿಕೆ ಮೇಲೆ ಇದ್ದರು.
ಸಾಮಾನ್ಯ ಆರೋಗ್ಯ ತಪಾಸಣೆ ಜೊತೆಗೆ ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆಯೂ ಶಿಬಿರದಲ್ಲಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜನರು ತಪಾಸಣೆ ಮಾಡಿಸಿಕೊಂಡರು.
ಶಿಬಿರದಲ್ಲಿ ಪರಿಣಿತ ವೈದ್ಯರಾದ ಡಾ.ಶ್ರೀವಿಶಾಲ ವಿ. ಹುಡಗಿ, ಡಾ.ಸಂಧ್ಯಾ ವಿ.ಹುಡಗಿ, ಡಾ.ಪ್ರಶಾಂತ ವಿ.ಹುಡಗಿ, ಡಾ.ಲಕ್ಷ್ಮೀಶ್ರೀ ಪಿ.ಹುಡಗಿ, ಡಾ.ವಿನೋದ ವಿ.ಹುಡಗಿ ಹಾಗೂ ಡಾ.ಪ್ರಿಯಾಂಕಾ ವಿ.ಹುಡಗಿ ಅವರು ವಿವಿಧ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.ಆಹಾರ ಪದ್ಧತಿ, ನಿತ್ಯ ಜೀವನ ಶೈಲಿಯ ಬಗ್ಗೆಯೂ ತಿಳಿಸಿಕೊಡಲಾಯಿತು.
ಟ್ರಸ್ಟ್ ಪದಾಧಿಕಾರಿಗಳಾದ ಬಸವರಾಜ ಮಾಗಿ, ಸಿದ್ಧಲಿಂಗ ಗುಬ್ಬಿ, ಶಿವಕುಮಾರ ಪಾಟೀಲ, ಬಂಡಪ್ಪ ಕೇಸೂರ, ಮನೋಹರ ಬಡಶೇಷಿ, ಎಂ.ಡಿ.ಮಠಪತಿ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮಹಿಳಾ ಸದಸ್ಯೆಯರಾದ ಸುಷ್ಮಾ ಮಾಗಿ, ಅನಿತಾ ನವಣಿ, ಸುರೇಖಾ ಬಾಲಕೊಂದೆ ಸೇರಿದಂತೆ ಹಲವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.