ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಆರೋಗ್ಯ ತಪಾಸಣೆ

Last Updated 22 ಫೆಬ್ರುವರಿ 2020, 11:15 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನಕನ್ಸಲ್ಟಿಂಗ್‌ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಷನ್ ಮತ್ತು ಭಾರತ್‌ ಸಿಮೆಂಟ್ ಆಶ್ರಯದಲ್ಲಿ ಈಚೆಗೆ ಕಟ್ಟಡ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಆಕಸ್ಮಿಕ ಅಪಘಾತ ಸಲುವಾಗಿ ಉಚಿತವಾಗಿ ಇನ್ಸೂರನ್ಸ್ ಪಾಲಿಸಿ ಕೊಡಿಸುವ ಕ್ರಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದವ ಅಸೋಸಿಯೇಷನ್ ಅಧ್ಯಕ್ಷರಾದ ಜಿತೇಂದ್ರ ಮಿಶ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ರಾಜಶೇಖರ ಶೀಲವಂತ, ಕಾರ್ಯದರ್ಶಿ ಅನಿಕುಮಾರ ಗಂಗಾಣೆ ಮತ್ತು ಭಾರತ್‌ ಸಿಮೆಂಟ್ ಜನರಲ್ ಮ್ಯಾನೇಜರ್‌ ಮಂಜುನಾಥ ಎ.ಪಿ. ಮತ್ತು ಡಾ.ಆರ್.ಎನ್. ಸಾಲೂಟಗಿ, ಡಾ.ಶ್ರೀನಿವಾಸ ಗಾಳಿ, ಡಾ.ಸುಶ್ಮಾ ಗಾಳಿ ಅವರು ವೇದಿಕೆಯಲ್ಲಿದ್ದರು.

ಸುಮಾರು 300 ಜನ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆಕಸ್ಮಿಕ ಅಪಘಾತ ಸಲುವಾಗಿ ಉಚಿತವಾಗಿ ಇನ್ಸೂರೆನ್ಸ್ ಮಾಡಿಸಲಾಯಿತು. ಎಲ್ಲ ಎಂಜಿನಿಯರ್‌ಗಳಿಗೆ ಸಸಿಗಳನ್ನು ಕೊಡಲಾಯಿತು. ಭಾರತ್‌ ಸಿಮೆಂಟ್‌ನ ಅಭಿಷೇಕ ಪಾಟೀಲ, ಚನ್ನಬಸಪ್ಪ ಮತ್ತು ಕಂಪನಿಯ ಎಲ್ಲ ಸದ್ಯಸರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT