ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಹಬ್ಬವಾಡಿದ ಹಿಂದೂ– ಮುಸ್ಲಿಂ ಯುವಕರು

Last Updated 17 ಮಾರ್ಚ್ 2022, 20:25 IST
ಅಕ್ಷರ ಗಾತ್ರ

ಕಲಬುರಗಿ: ಹೋಳಿ ಹಬ್ಬದ ಮುನ್ನಾದಿನವಾದ ಗುರುವಾರವೇ ನಗರದ ವಿವಿಧೆಡೆ ರಂಗಿನಾಟ ನಡೆಯಿತು. ಇಲ್ಲಿನ ಪುಟಾಣಿ ಗಲ್ಲಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹಿಂದೂ ಹಾಗೂ ಮುಸ್ಲಿಂ ಯುವಕರು ಪರಸ್ಪರ ಬಣ್ಣ ಹೆಚ್ಚಿ, ತಮಟೆ ಬೀಟ್‌ಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪುಟಾಣಿ ಗಲ್ಲಿ ವ್ಯಾಪಾರಿಗಳ ಮುಖಂಡ ಬಾಬುರಾವ್‌ ಜಹಾಗೀರದಾರ್‌, ಇಮ್ರಾನ್‌, ಇಕ್ಬಾಲ್‌ ಅವರ ನೇತೃತ್ವದಲ್ಲಿ ಎಲ್ಲರೂ ಹೋಳಿ ಹಬ್ಬದ ಹಾಡು ಹಾಡಿ, ಕುಣಿದು ನಲಿದರು. ಕೆಂಪು ಬಣ್ಣದ ಪುಡಿ ಹಾಗೂ ನೀರಲ್ಲಿ ಕಲಸಿದ ವರ್ಣವನ್ನು ಎರಚಾಡಿ, ಪರಸ್ಪರ ಶುಭ ಕೋರಿದರು.

ನಗರದ ಮಿಲನ್‌ ಚೌಕ್‌, ಚಪ್ಪಲ್‌ ಬಜಾರ್‌, ಬ್ರಹ್ಮಪೂರ, ಒಕ್ಕಲಗೇರಿ, ರೋಜಾ ಬಡಾವಣೆ ಸೇರಿದಂತೆ ವಿವಿಧೆಡೆ ಕೂಡ ಗುರುವಾರವೇ ಬಣ್ಣದಾಟ ನಡೆಯಿತು.

‘ಗುರುವಾರ ಮಧ್ಯಾಹ್ನ 1ಕ್ಕೆ ಆರಂಭವಾಗುವ ಹುಣ್ಣಿಮೆಯು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಗಿಯುತ್ತದೆ. ಹುಣ್ಣಿಮೆ ಮುಗಿದ ಬಳಿಕ ಕಾಮನನ್ನು ಸುಡುವುದು ಸರಿಯಲ್ಲ. ಮೇಲಾಗಿ, ಶುಕ್ರವಾರ ಬೆಳಿಗ್ಗೆಯಿಂದಲೇ ಮೊಸರು ಗಡಿಗೆ ಒಡೆಯುವ ಸ್ಪರ್ಧೆಗಳು ಆರಂಭವಾಗುತ್ತವೆ. ಹಾಗಾಗಿ, ಮುನ್ನಾದಿನವೇ ನಾವು ಬಣ್ಣ ಎರಚಾಟ ಮಾಡಿ, ಕಾಮನ ಪ್ರತಿಮೆ ಸುಡುವ ಪದ್ಧತಿ ರೂಢಿಸಿಕೊಂಡಿದ್ದೇವೆ’ ಎಂದು ಮುಖಂಡ ಬಾಬುರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT