ಬುಧವಾರ, ನವೆಂಬರ್ 20, 2019
25 °C

ಹುಳಿಬಾನ ಮಾಡುವ ವಿಧಾನ ಹೇಗೆ?

Published:
Updated:

ಕಲಬುರ್ಗಿ: ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಹುಳಿಬಾನಕ್ಕೆ ವಿಶೇಷ ಮಹತ್ವವಿದೆ. ಅತ್ಯಂತ ಪ್ರಾಚೀನ ಗ್ರಾಮೀಣ ಖಾದ್ಯದ ಪೈಕಿ ಬಾನವೂ ಒಂದು.

ಜಾತ್ರೆ, ಹಬ್ಬ ಹರಿದಿನ ಹಾಗೂ ದೇವರ ಪರ್ವ (ಸ್ಥಳೀಯ ದೇವತೆಗಳ ಆರಾಧನೆ)ದ ಸಂದರ್ಭದಲ್ಲಿ ಜೋಳ ಅಥವಾ ಅಕ್ಕಿಯಿಂದ ಹುಳಿಬಾನವನ್ನು ತಯಾರಿಸಿ ಭಕ್ತರು ಹಾಗೂ ಓಣಿಯ ಜನರಿಗೆ ಹಂಚಲಾಗುತ್ತದೆ.

ಇದನ್ನು ತಯಾರಿಸುವ ವಿಧಾನ ಹೀಗಿದೆ: ಜೋಳ ಅಥವಾ ಅಕ್ಕಿಯನ್ನು ಮೊದಲು ಕುಟ್ಟಬೇಕು. ಅದಕ್ಕೆ ಮಜ್ಜಿಗೆ ಹಾಗೂ ನೀರನ್ನು ಬೆರೆಸಿ ಒಂದು ದಿನ ದೊಡ್ಡ ಪಾತ್ರೆಯಲ್ಲಿ ಒಂದಿಡೀ ದಿನ ನೆನೆ ಹಾಕಬೇಕು. ಮರುದಿನ ಅದನ್ನು ಚೆನ್ನಾಗಿ ಕುದಿಸಬೇಕು. ನಂತರ ಸಿದ್ಧಗೊಂಡ ಹುಳಿಬಾನಕ್ಕೆ ಬಳ್ಳೊಳ್ಳಿಯನ್ನು ಬೆರೆಸಬೇಕು.

ಹೀಗೆ ಸಿದ್ಧವಾದ ಬಾನವನ್ನು ರೊಟ್ಟಿಯೊಂದಿಗೆ ಪಲ್ಯದ ರೂಪದಲ್ಲಿ ಹಚ್ಚಿಕೊಂಡು ಸೇವಿಸಬೇಕು. ಹೀಗೆ ಸಿದ್ಧವಾದ ಬಾನದಲ್ಲಿ ಹುಳಿಯ ಪ್ರಮಾಣ ಜಾಸ್ತಿ ಇರುವುದರಿಂದ ಎರಡು ದಿನಗಳವರೆಗೂ ಕೆಡುವುದಿಲ್ಲ. ಹೀಗಾಗಿಯೇ, ಮೂರು ಹೊತ್ತೂ ಜೋಳ ಅಥವಾ ಸಜ್ಜೆಯ ಕಟಕ್‌ ರೊಟ್ಟಿಯೊಂದಿಗೆ ಬಾನವನ್ನು ಊಟ ಮಾಡಬಹುದು.

ಪ್ರತಿಕ್ರಿಯಿಸಿ (+)