ಗುರುವಾರ , ಏಪ್ರಿಲ್ 15, 2021
31 °C

ಜೋಗೂರ ಪ್ರೌಢಶಾಲೆಯಲ್ಲಿ ಪರಿಸರ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತಾಲ್ಲೂಕಿನ ಜೋಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ಹಸಿರು ಪಡೆಯಿಂದ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣ ಪರಪ್ಪಗೋಳ ಮಾತನಾಡಿ, ‘ಮನುಷ್ಯನ ವಿವೇಚನ ರಹಿತವಾಗಿ ಪರಿಸರದ ಮೇಲೆ ಮಾಡುತ್ತಿರುವ ಆಕ್ರಮಣದಿಂದಾಗಿ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಆ ಪೈಕಿ ಹೆಚ್ಚುತ್ತಿರುವ ತಾಪಮಾನವು ಕೂಡ ಒಂದಾಗಿದೆ. ಪರಿಸರದ ಮೇಲೆ ನಾವು ಮಾಡುತ್ತಿರುವ ಅತಿಕ್ರಮಣದಿಂದಾಗಿ ಕೆಟ್ಟ ಪರಿಣಾಮಗಳಾಗುತ್ತಿವೆ. ಮನುಷ್ಯನ ಮೇಲಾಗುವ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಆದರೆ ಪರಿಸರ ಹಾನಿಯನ್ನು ಮಾತ್ರ ಪರಿಗಣಿಸುತ್ತಿಲ್ಲ’ ಎಂದು ಹೇಳಿದರು.

ಶಿಕ್ಷಕಿ ಅರುಣಾ ದೇಸಾಯಿ ಮಾತನಾಡಿ, ‘ಪರಿಸರ ಸಂರಕ್ಷಣೆ ಬಗ್ಗೆ ನಾವು ಕೇವಲ ಮಾತನಾಡಿದರೆ ಸಾಲದ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕಿದೆ, ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಬೇಕಿದೆ. ಗಿಡ ಮರಗಳನ್ನು ನೆಡುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ ಕುಲಕರ್ಣಿ, ‘ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಗಿರುತ್ತದೆ, ಶಿಕ್ಷಕರಾದ ನಾವುಗಳು  ಅದನ್ನು ಗುರುತಿಸಿ ಹೊರತರಬೇಕಾದ ಕೆಲಸ ಮಾಡಬೇಕಾಗಿದೆ. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯದಿಂದಾಗಿ ಪರಿಸರ ನಾಶವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಕ ಹುಲಿಕಂಠರಾಯ ಅರಳಗುಂಡಗಿ, ಗಂಗೋತ್ರಿ ಸಜ್ಜನ, ಶೈಲಜಾ ಪಾಟೀಲ, ರಾಹುಲ, ಸಂಗಣ್ಣ ಭಾಸಗಿ, ಶೋಭಾವತಿ ಬನಶೆಟ್ಟಿ, ಶಾಂತಾ ಪಂಡಿತ, ವೆಂಕಟೇಶ ಕುಲಕರ್ಣಿ, ದೇವಿಂದ್ರ ಬಡಿಗೇರ, ಇದ್ದರು.

ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿಗಳು ‘ಹಸಿರೇ ಉಸಿರು’ ಎನ್ನುವ ಕಿರು ನಾಟಕವನ್ನು ಪ್ರದರ್ಶಿಸಿದರು.

ಭಾಷಣ ಸ್ಪರ್ಧೆಯಲ್ಲಿ ದಾನಮ್ಮ ಪ್ರಥಮ, ಖಾಜಾಮೈನುದ್ದಿನ್ ದ್ವಿತೀಯ, ವಿರೂಪಾಕ್ಷ ತೃತೀಯ, ಪ್ರಬಂಧ ಸ್ಪರ್ಧೆಯಲ್ಲಿ ಕಾವೇರಿ ಪ್ರಥಮ, ನವೀನ ದ್ವೀತಿಯ, ಅಪ್ಸನಾ ತೃತೀಯ ಸ್ಥಾನ ಪಡೆದರು. ಶೋಭಾವತಿ ಬನಶೆಟ್ಟಿ ಸ್ವಾಗತಿಸಿದರು. ಶಾಂತಾ ಪಂಡಿತ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.