ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಿಗ್ಗಾಂವ್ ಗ್ರಾಮದಿಂದ ಬೆನಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುವ ವೇಳೆ ಸಿಕ್ಕಿಬಿದ್ದಿದ್ದ ಪೊಲೀಸರಿಬ್ಬರನ್ನು ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ
ಎಸ್.ಡಿ. ಇಲಾಖಾ ವಿಚಾರಣೆ ಬಾಕಿ ಇರಿಸಿ ಗುರುವಾರ
ಅಮಾನತುಗೊಳಿಸಿದ್ದಾರೆ.

ಕಲಬುರಗಿ ನಗರದ ಎಂ.ಬಿ. ನಗರ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಗುರುನಾಥ ಹಾಗೂ ನಗರದ ಸಶಸ್ತ್ರ ಮೀಸಲು ಘಟಕದ ಕಾನ್ಸ್ಟೆಬಲ್ ಮಡಿವಾಳಪ್ಪ ಅಮಾನತುಗೊಂಡವರು.

ಇವರು ಫೆಬ್ರುವರಿ 17ರಂದು ಇಸ್ಪೀಟ್ ಜೂಜಾಟದ ವೇಳೆಗೆ ಚಿತ್ತಾಪುರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಈ ಕುರಿತು ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸುಲು ಅವರ ವರದಿಯ ಅನ್ವಯ ಪೊಲೀಸ್ ಕಮಿಷನರ್ ಈ ಕ್ರಮ ಜರುಗಿಸಿದ್ದಾರೆ.