ಸೋಮವಾರ, ಅಕ್ಟೋಬರ್ 26, 2020
28 °C

ಕಲಬುರ್ಗಿ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಮಲಾಪುರ  ತಾಲ್ಲೂಕಿನ ಶ್ರೀಚಂದ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಗ್ರಾಮದ ಬೀರಶೆಟ್ಟಿ ಬೋದನವಾಡಿ (28) ಎಂಬುವವರ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. 

ಹೊಲದಲ್ಲಿ ಕೆಲಸ‌ ಮುಗಿಸಿಕೊಂಡು ಊರಿಗೆ ಭಾನುವಾರ ಸಂಜೆ ಬೈಕ್ ಮೇಲೆ‌ ಬರುವಾಗ ಹಳ್ಳ ದಾಟಲು ಯತ್ನಿದಾಗ ಪ್ರವಾಹಕ್ಕೆ ಸಿಲುಕಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಅದನ್ನು ಎತ್ತಿಕೊಂಡು ಚಾಲನೆ ಮಾಡಲು ಸುಮಾರು ಹೊತ್ತು ಯತ್ನಿಸಿದ್ದಾರೆ. ಆದರೆ, ವಾಹನದ ಎಂಜಿನ್ ಚಾಲೂ ಆಗಿಲ್ಲ. ತಕ್ಷಣ ಗ್ರಾಮಸ್ಥರು ಹಳ್ಳದ ಬಳಿ ಧಾವಿಸಿ ಬೀರಶೆಟ್ಟಿ ಅವರತ್ತ ಹಗ್ಗವನ್ನು ಎಸೆದಿದ್ದಾರೆ. ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ನೀರಿನ ಸೆಳೆತ ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದರು.

ಆಳಂದ ತಾಲ್ಲೂಕಿನ ನರೋಣಾ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಸೋಮವಾರ ಶವ ಪತ್ತೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು