ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದ ಗೋವುಗಳನ್ನು ಮೇಯಿಸಿದ ಕೆಎಎಸ್ ಅಧಿಕಾರಿ ಆಶಪ್ಪ ಪೂಜಾರಿ

ರಟಕಲ್ ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ಆಶಪ್ಪ ಪೂಜಾರಿ
Published 12 ಆಗಸ್ಟ್ 2023, 7:30 IST
Last Updated 12 ಆಗಸ್ಟ್ 2023, 7:48 IST
ಅಕ್ಷರ ಗಾತ್ರ

ಕಾಳಗಿ(ಕಲಬುರಗಿ ಜಿಲ್ಲೆ): ತಾಲ್ಲೂಕಿನ ರೇವಗ್ಗಿ ಗ್ರಾಮದಲ್ಲಿ ಸೇಡಂ ಉಪ ವಿಭಾಗಧಿಕಾರಿಯೂ(ಎಸಿ) ಆಗಿರುವ ರೇವಗ್ಗಿ (ರಟಕಲ್) ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಆಶಪ್ಪ ಪೂಜಾರಿ ಅವರು ಶನಿವಾರ ಬೆಳಿಗ್ಗೆ ದೇವಸ್ಥಾನದ ಗೋವುಗಳನ್ನು ಮೇಯಿಸಿದರು.

ರೇವಣಸಿದ್ದೇಶ್ವರ ಗುಡ್ಡ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಇಲ್ಲಿನ ಗೋಶಾಲೆಯಲ್ಲಿ 295 ಜಾನುವಾರುಗಳಿವೆ. 7 ಜನ ಗೋಪಾಲಕರು ನಿತ್ತ ಬೆಳಿಗ್ಗೆ 10ರಿಂದ ಸಂಜೆಯವರೆಗೆ ಗೋವುಗಳನ್ನು ಮೇಯಿಸುತ್ತಾರೆ.

ಸರಿಯಾಗಿ ಮೇವು ಸಿಗದೆ ಸೊರಗಿದ ಗೋವುಗಳನ್ನು ಆಶಪ್ಪ ಪೂಜಾರಿ ಅವರು ಗಮನಿಸಿದರು. ಶುಕ್ರವಾರ(ಆ.11) ರಾತ್ರಿ ಗುಡ್ಡದಲ್ಲೇ ವಾಸ್ತವ್ಯ ಮಾಡಿದರು. ಶನಿವಾರ ಬೆಳಿಗ್ಗೆ 6ಕ್ಕೆ ಗೋಶಾಲೆಯ ಎಲ್ಲಾ ರಾಸುಗಳನ್ನು ಹೊರಗಡೆ ಬಿಟ್ಟರು. ಗುಡ್ಡದಲ್ಲಿ ಓಡಾಡಿಸುತ್ತಾ ಹಸಿ ಮೇವು ಕಾಣಿಸುತ್ತಿದ್ದ ಜಾಗದಲ್ಲಿ ನಿಲ್ಲಿಸಿ 10 ಗಂಟೆಯವರೆಗೂ ಮೇಯಿಸಿದರು.

'ನಿತ್ಯ ಬೆಳಿಗ್ಗೆ 6 ಗಂಟೆಯ ತಂಪು ಹೊತ್ತಿನಿಂದ ಗೋವುಗಳನ್ನು ಮೇಯಿಸುವುದು ರೂಢಿಮಾಡಿಕೊಳ್ಳಿ. ಇದರಿಂದ ಹಸುಗಳು ಹೆಚ್ಚು ಮೇವು ತಿಂದು ದೈಹಿಕ ಆರೋಗ್ಯದಿಂದ ಸದೃಢವಾಗುತ್ತವೆ' ಎಂದು ಆಶಪ್ಪ ಅವರು ಗೋಪಾಲಕರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT