ಚಿಂಚೋಳಿ(ಕಲಬುರ್ಗಿ ಜಿಲ್ಲೆ): ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ತಾಲ್ಲೂಕಿನ ದೋಟಿಕೊಳ ಕೆರೆಯ ಬಂಡ್‌ಗೆ ಹಾನಿಯಾಗಿದ್ದು ಕೆರೆ ಒಡೆಯುವುದು ತಪ್ಪಿಸಲು ಸಣ್ಣ ನೀರಾವರಿ ಇಲಾಖೆ ಎಂಜಿನಿಯರಗಳೇ, ಕೆರೆಯ ವೇಸ್ಟವೇರ್ ಒಡೆದು ನೀರು ಹೊರಕ್ಕೆ ಹರಿಸಿ ಕೆರೆ ಖಾಲಿ ಮಾಡುತ್ತಿದ್ದಾರೆ.
ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ 1972ರ ಬರಗಾಲದಲ್ಲಿ ನಿರ್ಮಿಸಿದ ಸಣ್ಣ ನೀರಾವರಿ ಕೆರೆಯ ಬಂಡ್ ಮೇಲಿನಿಂದ ನೀರು ಹರಿದು ಹೋಗಿ 3/4 ಕಡೆ ಬಂಡ್ ಹಾಳಾಗಿದೆ.
ಬಂಡಿನಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ಕೆರೆ ಅಪಾಯದಲ್ಲಿರುವುದು ಅರಿತ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೆರೆಯ ಹೆಚ್ಚುವರಿ ನೀರು ಹರಿದು ಹೋಗುವ ವೇಸ್ಟವೇಯರ್ ಸಂಪೂರ್ಣ ಒಡೆದು ಹಾಕಿದ್ದಾರೆ. ಜತೆಗೆ ಹಿಟ್ಯಾಚಿ ಬಳಸಿ ನೀರು ಹರಿದು ಹೋಗಲು ದಾರಿಮಾಡಲಾಗಿದೆ. ಈ ಮೂಲಕ ಕೆರೆಯ ನೀರು ಖಾಲಿ ಮಾಡಿ ಒಡೆದು ಹೋಗುವ ಕೆರೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.
ಕೆರೆ ಉಳಿಸಿಕೊಳ್ಳು ನೀರು ಖಾಲಿ ಅನಿವಾರ್ಯವಾಗಿದೆ ಎಂದು ಸಣ್ಣ ನೀರಾವರಿ ಉಪವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಪ್ರಜಾವಾಣಿಗೆ ತಿಳಿಸಿದರು.
ಪ್ರವಾಹದ ನೀರಿನ ಒತ್ತಡ ಕಡಿಮೆ ಮಾಡಲು ವೇಸ್ಟವೇಯರ್ ಅಗೆಯಲಾಗಿದೆ ಜತೆಗೆ ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಗೇಟುಗಳು ತೆರೆಯಲಾಗಿದೆ. ಮೂರು ದಿನಗಳಿಂದ ಹರಿಯುತ್ತಿದೆ. ಪ್ರವಾಹದಿಂದ ದೋಟಿಕೊಳ ಕೆರೆಗೆ ₹ 3 ಕೋಟಿ ನಷ್ಟ ಸಂಭವಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.