ಶುಕ್ರವಾರ, ಅಕ್ಟೋಬರ್ 23, 2020
28 °C

ವಿದ್ಯುತ್ ತಗುಲಿ ಲೈನ್‌ಮನ್‌ ದುರಂತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಲೈನ್‌ಮನ್‌ ರಾಘವೇಂದ್ರ ಹುಲಗಪ್ಪ ಗೋಗರೆ (26)  ವಿದ್ಯುತ್ ತಗುಲಿ ಮಂಗಳವಾರ ಬೆಳಿಗ್ಗೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇವರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಸಾಪೂರ ಗ್ರಾಮದ ನಿವಾಸಿಯಾಗಿದ್ದರು.

ಅರಳಗುಂಡಗಿ ಮತ್ತು ಆಲೂರ ಗ್ರಾಮಕ್ಕೆ ‘ಎಲ್ಸಿ’ (ಲೈನ್‌ ಕಟ್‌) ತೆಗೆದುಕೊಳ್ಳಲಾಗಿತ್ತು. ಯಡ್ರಾಮಿ ಉಪವಿಭಾಗದಲ್ಲಿ ಅರಳಗುಂಡಗಿ ಹಾಗೂ ಆಲೂರಕ್ಕೆ ಒಂದೇ ಸಂಪರ್ಕ ಇತ್ತು. ಆಲೂರ ಗ್ರಾಮದಲ್ಲಿ ಕೆಲಸ ಮುಗಿದ ನಂತರ ಅಲ್ಲಿಗೆ ಹೋಗಿದ್ದ ಲೈನ್‌ಮನ್‌ ಲೈನ್ ಕ್ಲಿಯರ್‌ ಎಂದು ಉಪ ವಿಭಾಗ ಕೇಂದ್ರಕ್ಕೆ ತಿಳಿಸಿದ್ದಾರೆ. ತಕ್ಷಣ ಯಡ್ರಾಮಿ ಉಪವಿಭಾಗ ಕೇಂದ್ರದ ಅಧಿಕಾರಿಗಳು ವಿದ್ಯುತ್ ಹಾಕಿದ್ದಾರೆ. ಆಗ ಅರಳಗುಂಡಗಿಯಲ್ಲಿ ಟ್ರನ್ಸ್‌ಫಾರ್ಮರ್‌ ಮೇಲೆ ನಿಂತು ಕೆಲಸ ಮಾಡುತ್ತಿದ್ದ ರಾಘವೇಂದ್ರ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಯಡ್ರಾಮಿ ಪಿಎಸ್ಐ ಗಜಾನಂದ ಬಿರಾದಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.