ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.65 ಲಕ್ಷ ಮೌಲ್ಯದ ಮದ್ಯ, ಬಿಯರ್ ವಶ

Last Updated 1 ಮೇ 2021, 13:51 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿಯ ಗಂಜ್, ಯಡ್ರಾಮಿ ತಾಲ್ಲೂಕಿನ ಅಂಬರಖೇಡ ಗ್ರಾಮ ಹಾಗೂ ಅಫಜಲಪುರ ತಾಲ್ಲೂಕಿನ ಉಮರ್ಗಾ ಗ್ರಾಮದಲ್ಲಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಒಟ್ಟು ₹ 1.65 ಲಕ್ಷ ಮೌಲ್ಯದ ಮದ್ಯ, ಬಿಯರ್‌ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಲಬುರ್ಗಿಯ ಗಂಜ್‌ ಪ್ರದೇಶದಲ್ಲಿ ಅಕ್ರಮವಾಗಿ ಸ್ಕೂಟರ್‌ನಲ್ಲಿ ಸಾಗಾಟ ಮಾಡುತ್ತಿದ್ದ ಮದ್ಯ ಹಾಗೂ ಬಿಯರ್‌ಗಳನ್ನು ಕಲಬುರ್ಗಿ ವಲಯ–1ರ ಅಬಕಾರಿ ಇನ್‌ಸ್ಪೆಕ್ಟರ್ ಬಾಲಕೃಷ್ಣ ಮುದಕಣ್ಣ ನೇತೃತ್ವದ ತಂಡ ವಶಪಡಿಸಿಕೊಂಡಿದೆ.

21.600 ಲೀಟರ್ ಮದ್ಯ, 7.800 ಲೀಟರ್ ಬಿಯರ್, ಟಿವಿಎಸ್ ಎಕ್ಸೆಲ್ ಹಾಗೂ ಟಿವಿಎಸ್‌ ಜೂಪಿಟರ್‌ ಸ್ಕೂಟರ್‌ ಸೇರಿದಂತೆ ₹ 65 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಪಿಎಸ್‌ಐ ಬಸವರಾಜ ಉಳ್ಳೆಸೂಗುರ, ಕೆ. ಪ್ರವೀಣಕುಮಾರ, ಸಿಬ್ಬಂದಿಯಾದ ವಸಂತ, ಮೋಹನ, ರಾಜೇಂದ್ರ, ಎಂ.ಡಿ. ಮುಬೀನ್, ರಾಮೇಶ್ವರ, ಶಿವಪ್ಪಗೌಡ ಮತ್ತು ವೆಂಕಟೇಶ ಭಾಗವಹಿಸಿದ್ದರು.

ಜೇವರ್ಗಿ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ವನಿತಾ ಸೀತಾಳೆ ನೇತೃತ್ವದ ತಂಡವು ಶುಕ್ರವಾರ ಅಂಬರಖೇಡ ಗ್ರಾಮದ ಆಂಜನೇಯ ದೇವಸ್ಥಾನದ ಪಾಳು ಬಿದ್ದಿರುವ ಕಟ್ಟಡದ ಮೇಲೆ ದಾಳಿ ಮಾಡಿ ಮಾರಾಟಕ್ಕೆಂದು ಸಂಗ್ರಹಿಸಿಟ್ಟಿದ್ದ 8 ಪೆಟ್ಟಿಗೆಗಳಲ್ಲಿದ್ದ 69.120 ಲೀಟರ್‌ ಸ್ವದೇಶಿ ಮದ್ಯವನ್ನು ಜಪ್ತಿ ಮಾಡಿಕೊಂಡಿತು.

ಆಳಂದ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ಶ್ರೀಶೈಲ ಅವಜಿ ನೇತೃತ್ವದ ತಂಡವು ಉಮರ್ಗಾ ಗ್ರಾಮದ ಲಕ್ಷ್ಮಿಕಾಂತ ಸಂಗಣ್ಣ ಎಂಬುವವರ ಕಿರಾಣಿ ಅಂಗಡಿಯ ಮೇಲೆ ದಾಳಿ ಮಾಡಿ 2 ಪೆಟ್ಟಿಗೆ (17.280 ಲೀಟರ) ಒರಿಜಿನಲ್ ಚಾಯ್ಸ್‌ ವಿಸ್ಕಿ ಹಾಗೂ 15.720 ಲೀಟರ ಬಿಯರ್‌ ಜಪ್ತಿ ಮಾಡಿತು. ಪರಾರಿಯಾಗಿದ್ದ ಆರೋಪಿ ವಿರುದ್ಧ ಅಬಕಾರಿ ಎಸ್‌ಐ ಅಶೋಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್‌. ಒಡೆಯರ ಅವರ ಮಾರ್ಗದರ್ಶನ, ಅಬಕಾರಿ ಡಿವೈಎಸ್ಪಿ ಮಹ್ಮದ್‌ ಇಸ್ಮಾಯಿಲ್‌ ಇನಾಮದಾರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಒಟ್ಟಾರೆ ₹ 1 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT