ಮನೆ ಕಳುವು: 3 ವರ್ಷ ಶಿಕ್ಷೆ

7

ಮನೆ ಕಳುವು: 3 ವರ್ಷ ಶಿಕ್ಷೆ

Published:
Updated:

ಕಲಬುರ್ಗಿ: ಕಳ್ಳತನ ಮಾಡಿದ ಅಫಜಲಪುರ ರಸ್ತೆ ರೈಲ್ವೆ ನೌಕರರ ಕಾಲೊನಿಯ ಜ್ವಾಲೇಂದ್ರನಾಥ ರವಿಚಂದ್ರಕಾಂತ ಕಾವಲೆಗೆ ನ್ಯಾಯಾಲಯ ಮೂರು ವರ್ಷ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.

ಈತ ನಗರದ ಸಿಐಬಿ ಕಾಲೊನಿಯ ಜ್ಞಾನೇಶ್ವರ ಯಶವಂತರಾವ ನವಲೆ ಅವರ ಮನೆಯಲ್ಲಿ ₹24,500 ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಶೋಕನಗರ ಠಾಣೆಯ ಎಎಸ್‌ಐ ಗೋವಿಂದರೆಡ್ಡಿ ತನಿಖೆ ನಡೆಸಿದ್ದರು.

ಸ್ಥಳೀಯ 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸುಭಾಸಚಂದ್ರ ರಾಠೋಡ, ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಛಾಯಾದೇವಿ ಪಾಟೀಲ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !