ಬುಧವಾರ, ಆಗಸ್ಟ್ 17, 2022
25 °C

ನೀರಿಗೆ ಹಾರಿದ ಯುವಕ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತಾಲ್ಲೂಕಿನ ಕುರಿಕೋಟಾ ಸೇತುವೆ ಬಳಿ ಭಾನುವಾರ ಯುವಕನೊಬ್ಬ ನೀರಿಗೆ ಬಿದ್ದು, ನಾ‍ಪತ್ತೆಯಾಗಿದ್ದಾನೆ.

ಕಲಬುರ್ಗಿ ನಗರದ ರೇವಣಸಿದ್ಧೇಶ್ವರ ಕಾಲೊನಿ ನಿವಾಸಿ ಮಂಜುನಾಥ ರಂಗರಾವ (27) ನೀರಿಗೆ ಹಾರಿದ ಯುವಕ. ಬೆಣ್ಣೆತೊರಾದ ನೀರಿಗೆ ಬೀಳುವ ಮುನ್ನ ಮೊಬೈಲ್‌ನಿಂದ ಮನೆಯವರಿಗೆ ಕರೆ ಮಾಡಿದ ಯುವಕ, ಕುರಿಕೋಟಾ ಸೇತುವೆಯಲ್ಲಿ ಜಿಗಿಯುತ್ತಿರುವುದಾಗಿ ಹೇಳಿದ್ದಾನೆ. ಕುಟುಂಬದವರು ತಕ್ಷಣವೇ ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ, ಸೇತುವೆ ಮೇಲೆ ಯುವಕನ ದ್ವಿಚಕ್ರವಾಹನ ಮಾತ್ರ ಸಿಕ್ಕಿದೆ. ಯುವಕನ ಹುಡುಕಾಟ ಭಾನುವಾರ ರಾತ್ರಿ ಕೂಡ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‍ಐ ಹುಸೇನ್ ಬಾಷಾ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಯುವಕನ ಹುಡುಕಾಟ ಆರಂಭಿಸಿದ್ದಾರೆ. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.