ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹ ಪ್ರೋತ್ಸಾಹ ಧನ ₹ 1 ಲಕ್ಷಕ್ಕೆ ಏರಿಕೆ: ಬಸವರಾಜ ಹೆಳವರ ಯಾಳಗಿ ಹರ್ಷ

Last Updated 13 ಜನವರಿ 2022, 9:59 IST
ಅಕ್ಷರ ಗಾತ್ರ

ಕಲಬುರಗಿ: ಅಂಗವಿಕಲ ಯುವಕ, ಯುವತಿಯರನ್ನು ಸಾಮಾನ್ಯರು ವಿವಾಹವಾದಲ್ಲಿ ದಂಪತಿಗೆ ನೀಡುವ ಪ್ರೋತ್ಸಾಹಧನವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಹೆಚ್ಚಿಸಿದ ಸರ್ಕಾರದ ನಿರ್ಧಾರಕ್ಕೆ ಡಿಸೇಬಲ್ಡ್‌ ಹೆಲ್ಪ್‌ ಲೈನ್ ಫೌಂಡೇಶನ್‌ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ‘ಮೊದಲು ದಂಪತಿ ಹೆಸರಿನಲ್ಲಿ ₹ 50 ಸಾವಿರವನ್ನು 5 ವರ್ಷದ ಅವಧಿಗೆ ನಿಶ್ಚಿತ ಠೇವಣಿಯ ರೂಪದಲ್ಲಿಡುವ ವಿವಾಹ ಪ್ರೋತ್ಸಾಹ ಧನ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿತ್ತು. ಇತ್ತಿಚೆಗೆ ಅಂಗವಿಕಲರ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಪ್ರೋತ್ಸಾಹ ಧನವನ್ನು ₹ 1 ಲಕ್ಷಕ್ಕೆ ಹೆಚ್ಚಿಸಿ 10 ವರ್ಷದ ಅವಧಿಗೆ ನಿಶ್ಚಿತ ಠೇವಣಿಯನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT