ಕಲಬುರಗಿ: ನಗರದಲ್ಲಿ ಭಾನುವಾರ ಬೆಳಿಗ್ಗೆ ಮಾನಸಿಕ ಅಸ್ವಸ್ಥನೊಬ್ಬ ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ವಿವಿಧ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ನಂತರ ಸಾರ್ವಜನಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದರು.

ಇಲ್ಲಿನ ಎಂಎಸ್ ಕೆ ಮಿಲ್ ಮುಖ್ಯ ರಸ್ತೆಯಲ್ಲಿರುವ ನೊಬೆಲ್ ಶಾಲೆಯ ಮುಂಭಾಗದಲ್ಲಿ ಏಕಾಏಕಿ ರಸ್ತೆಗೆ ಬಂದವರ ಮೇಲೆ ಕಲ್ಲುಗಳ ತೂರಾಟ ನಡೆಸಿದ್ದಾನೆ. ಬೈಕ್, ಕಾರುಗಳಲ್ಲಿ ಸಂಚರಿಸುತ್ತಿದ್ದವರ ಮೇಲೆ ಕಲ್ಲುಗಳು, ಇಟ್ಟಿಗೆಗಳನ್ನು ಎಸೆದಿದ್ದಾನೆ. ಇದರಿಂದ ಒಂದು ಕಾರು ಮತ್ತು ಆಟೊಗೆ ಕಲ್ಲೇಟು ಬಿದ್ದು ಗಾಜು ಜಖಂಗೊಂಡಿದೆ.

ಬಸ್ ನಲ್ಲಿ ಹಲವು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಕಲ್ಲೇಟು ತಾಗಿಲ್ಲ.

ಅಲ್ಲದೇ, ಕಾರು ಮತ್ತು ಆಟೊದಲ್ಲಿದ್ದವರೂ ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದ ಆತಂಕಕ್ಕೊಳಗಾಗಿದ್ದರು. ಈ ವೇಳೆ ಕೆಲ ಯುವಕರು ಮುನ್ನುಗ್ಗಿ ಆತನನ್ನು ಹಿಡಿದರು.

ವಾರಾಂತ್ಯದ ಕರ್ಫ್ಯೂ ಇರುವುದರಿಂದ ವಾಹನ ಸಂಚಾರವೂ ವಿರಳವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.