ಬುಧವಾರ, ಆಗಸ್ಟ್ 10, 2022
23 °C
ಗರ್ಭಪಾತ ವೇಳೆ ಮೃತಪಟ್ಟಿದ್ದ ಪ್ರಿಯತಮೆ

ಹಳೆ ವೈಷಮ್ಯ: ಯುವಕನ ಕೊಲೆ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಹಿಂದಿ ಪ್ರಚಾರ ಸಭಾ ಮುಂಭಾಗದ ಮುಖ್ಯ ರಸ್ತೆಯಲ್ಲಿ ಬುಧವಾರ ತಡರಾತ್ರಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ರವಿಕುಮಾರ ಗೋಟೂರ್ ಅಲಿಯಾಸ್ ರವಿ ಪೂಜಾರಿ (30) ಕೊಲೆಯಾದ ವ್ಯಕ್ತಿ. 2019ರಲ್ಲಿ ಯುವತಿಯೊಬ್ಬರ ಕೊಲೆ ಪ್ರಕರಣದಲ್ಲಿ ರವಿಕುಮಾರ ಜೈಲು ಸೇರಿದ್ದ. 2021ರ ಫೆಬ್ರುವರಿಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಆತನ ಚಲನವಲನಗಳನ್ನು ಗಮನಿಸಿದ ದುಷ್ಕರ್ಮಿಗಳ ತಂಡ, ಬುಧವಾರ ರಾತ್ರಿ 2ಕ್ಕೆ ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುವಕನ ದೇಹದ ಬಹುಪಾಲು ಭಾಗಗಳಿಗೂ ದುಷ್ಕರ್ಮಿಗಳು ಮನಸೋ ಇಚ್ಚೆ ಇರಿದಿದ್ದಾರೆ. ಸತ್ತ ಬಳಿಕ ದೇಹವನ್ನು ಕುಳಿತ ಸ್ಥಿತಿಗೆ ತಂದು, ಮಾರಕಾಸ್ತ್ರಗಳನ್ನು ಸುತ್ತ ಇಟ್ಟು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು