ಆರ್.ಡಿ.ಪಾಟೀಲ ಖಾತೆಯಿಂದ ಹಣ ವಿತ್ ಡ್ರಾ ಆಗಿಲ್ಲ: ಮಾಹಿತಿ

ಕಲಬುರಗಿ: ‘ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಅವರ ಬ್ಯಾಂಕ್ ಖಾತೆಯಿಂದ ಯಾವುದೇ ಹಣ ವಿತ್‌ಡ್ರಾ ಆಗಿಲ್ಲ’ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪ್ರಕರಣ ಮುಂದುವರಿಸದಿರಲು ಶಂಕರಗೌಡ ಪಾಟೀಲ ಅವರು ₹3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾನು ₹76 ಲಕ್ಷ ಹಣ ಕೊಡುತ್ತೇನೆ ಎಂದು ಹೇಳಿ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಹಣ ಡ್ರಾ ಮಾಡಿಸಿ, ನನ್ನ ಅಳಿಯನ ಮೂಲಕ ತಲುಪಿಸಿದ್ದೆ’ ಎಂದು ಆರ್.ಡಿ. ಪಾಟೀಲ ವಿಡಿಯೊದಲ್ಲಿ ಹೇಳಿದ್ದ. ‘ಆರ್.ಡಿ ಪಾಟೀಲ ಹೇಳಿದ್ದ ಬ್ಯಾಂಕ್ ಆಫ್ ಬರೋಡ ಶಾಖೆಯ ಆತನ ಬ್ಯಾಂಕ್ ಖಾತೆ ವಿವರ ಪರಿಶೀಲಿಸಲಾಗಿದ್ದು, ₹76 ಲಕ್ಷ ಹಣ ವಿತ್ ಡ್ರಾ ಆಗಿಲ್ಲ. ಖಾತೆಯಿಂದ ವಹಿವಾಟು ನಡೆದ ದಾಖಲೆಗಳು ನಮೂದು ಆಗಿಲ್ಲ’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.