ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಂದರ್ಗಿ: ಮೃತ್ಯುಂಜಯ ಶ್ರೀಗಳ ಪಟ್ಟಾಧಿಕಾರ

ಭಕ್ತರ ಕಲ್ಯಾಣವೇ ಮಠದ ಗುರಿ– ಮೃತ್ಯುಂಜಯ ಶ್ರೀ
Last Updated 12 ನವೆಂಬರ್ 2019, 12:16 IST
ಅಕ್ಷರ ಗಾತ್ರ

ಆಳಂದ (ಕಲಬುರ್ಗಿ ಜಿಲ್ಲೆ): ‘ಗುರು ಸನ್ಮಾರ್ಗದ ದಾರಿ ತೋರುವ ಶಕ್ತಿಯಾಗಿದ್ದು, ಪ್ರತಿಯೊಬ್ಬ ಭಕ್ತನನ್ನು ಉದ್ಧರಿಸುವುದು ಮಠದ ಮೊದಲ ಕಾರ್ಯವಾಗಿದೆ’ ಎಂದು ಮೈಂದರ್ಗಿಯ ಸಿದ್ದಾಶ್ರಮ ವಿರಕ್ತ ಮಠದ ನೂತನ ಪೀಠಾಧಿಪತಿ ಮೃತ್ಯುಂಜಯ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಗಡಿ ಭಾಗದ ಮೈಂದರ್ಗಿಯ ಸಿದ್ದಾಶ್ರಮ ವಿರಕ್ತ ಮಠದಲ್ಲಿ ಸೋಮವಾರ ತಮ್ಮ ಪಟ್ಟಾಧಿಕಾರ ಮಹೋತ್ಸವದಲ್ಲಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

‘ಮಠದಿಂದ ಭಕ್ತರಿಗೆ ಉತ್ತಮ ಮೌಲ್ಯ ಮತ್ತು ಸಂಸ್ಕಾರದ ಜ್ಞಾನ ನೀಡುವ ಕೆಲಸವನ್ನು ಕೈಗೊಳ್ಳಲಾಗುವುದು’ ಎಂದರು.

ವಿಜಯಪುರದ ಅಭಿನವ ಶಿವಪುತ್ರ ಸ್ವಾಮೀಜಿ ಮಾತನಾಡಿ, ‘ನಮ್ಮ ಮಠಗಳಿಂದ ಬಸವಾದಿ ಶರಣರು ನೀಡಿದ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕ ನಿರಂತರವಾಗಿ ನಡೆಯಬೇಕು, ಸೇವೆ ಮಾಡುವ ವ್ಯಕ್ತಿಯು ಸದಾ ದೊಡ್ಡವನು ಆಗಿರುತ್ತಾನೆ’ ಎಂದರು.

ಮಾದನ ಹಿಪ್ಪರಗಾದ ಶಾಂತವೀರ ಸ್ವಾಮೀಜಿ ಮಾತನಾಡಿ, ‘ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಮೃತ್ಯುಂಜಯ ಸ್ವಾಮೀಜಿ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದರು.

ಮುಚಳಾಂಬದ ಪ್ರವಣಾವನಂದ ಸ್ವಾಮೀಜಿ, ಗುಳೇದಗುಡ್ಡದ ಬಸವರಾಜ ಸ್ವಾಮೀಜಿ, ಮಾಡಿಯಾಳದ ಮರುಳಸಿದ್ದ ಸ್ವಾಮೀಜಿ, ನೀರಲಕೇರಿ ಘನಲಿಂಗ ಸ್ವಾಮೀಜಿ, ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ, ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಮಹಾಂತ ಸ್ವಾಮೀಜಿ, ರೇವಣಸಿದ್ದ ಸ್ವಾಮೀಜಿ ಇದ್ದರು.

ಮೃತ್ಯುಂಜಯ ಶ್ರೀಗಳ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜರುಗಿತು. ಗ್ರಾಮದ ಮುಖಂಡರಾದ ಅಶೋಕ ಪಾಟೀಲ, ಧಾನಪ್ಪ ಗುಂಡದ, ಸಿದ್ದಾರೂಡ ಯಳಸಂಗಿ, ಸುಭಾಷ ಬಂಡೆ, ಸಿದ್ದರಾಮ ಪಾಟೀಲ ಇದ್ದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT