ಆಳಂದ: ‘ಮನೆ, ಅಂಗಡಿ, ಹೋಟೆಲ್, ಹೊಲಗದ್ದೆ ಸೇರಿದಂತೆ ಆಕಸ್ಮಿಕ ಬೆಂಕಿ ಅವಘಡಗಳು ತಡೆಗಟ್ಟಲು ಜನಸಾಮಾನ್ಯರು ಸಹ ಅಗತ್ಯ ಮುನ್ನೆಚ್ಚೆರಿಕೆ ವಹಿಸುವುದು ಅಗತ್ಯವಾಗಿದೆ’ ಎಂದು ಆಳಂದ ಅಗ್ನಿಶಾಮಕ ಠಾಣಾಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ವಿವೇಕ ವರ್ಧನಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಳಂದ ಅಗ್ನಿ ಶಾಮಕ ದಳದಿಂದ ಏರ್ಪಡಿಸಿದ್ದ ಅಗ್ನಿ ಅವಘಡ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮನೆಯಲ್ಲಿ ಸಿಲಿಂಡರ್ ಸ್ಫೋಟ, ವಿದ್ಯುತ್ ಸ್ಪರ್ಶ ಮತ್ತಿತರ ಬೆಂಕಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ದಳಕ್ಕೆ ಸಂಪರ್ಕಿಸುವದು ಅಗತ್ಯವಾದದು, ಇದರ ಜತೆಗೆ ಸಣ್ಣಪುಟ್ಟ ಬೆಂಕಿಯು ಆರಂಭದಲ್ಲಿ ನಿಯಂತ್ರಿಸಲು ಸಹ ಮುಂದಾಗಬೇಕು. ಇದರಿಂದ ಹೆಚ್ಚಿನ ಅನಾಹುತ ತಪ್ಪುತ್ತದೆ’ ಎಂದರು.

ಪ್ರಾಚಾರ್ಯ ಸಂತೋಷ ಪಾಟೀಲ ಮಾತನಾಡಿದರು. ಅಗ್ನಿ ಶಾಮಕದಳದ ಅಧಿಕಾರಿಗಳಾದ ಶೇಖ ಇಮಾಮ್ ಅಲಿ, ವೈಜುನಾಥ ಜಿಡಗೆ, ಪ್ರಭಾಕರ ಜವಳಿ, ಸುಭಾಷ ಮಾನೆ, ಸಿಬ್ಬಂದಿಗಳಾದ ಎಂ.ಡಿ.ಇಬ್ರಾಹಿಂ, ಸೈಫಾನ್ ಮುಲ್ಕ್, ಮಲ್ಲಿಕಾರ್ಜುನ, ಸಿದ್ದರಾಮ, ಅವಿನಾಶ, ಅಮೀರ್, ರವೀಂದ್ರ, ಭೀಮಾಶಂಕರ , ಸುಭಾಷಚಂದ್ರ ಬೋಸ್, ಶಿವರಾಜ, ಸಿದ್ದಪ್ಪ ಉಪಸ್ಥಿತರಿದ್ದರು.

ಶಾಲಾ ಆವರಣದಲ್ಲಿ ವಿವಿಧ ಬೆಂಕಿ ಅನಾಹುತಗಳು ತಡೆ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.