ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೌಭಾಗ್ಯಸಿರಿ ಕಾಯಕ ರತ್ನ’ ಪ್ರಶಸ್ತಿ ಪ್ರದಾನ

Published 1 ಜುಲೈ 2024, 5:30 IST
Last Updated 1 ಜುಲೈ 2024, 5:30 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೌಭಾಗ್ಯಸಿರಿ ಸಾಮಾಜಿಕ ಸೇವಾ ಟ್ರಸ್ಟ್ ಉದ್ಘಾಟನೆ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸೌಭಾಗ್ಯಸಿರಿ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಎಸ್.ಎಚ್. ಕಟ್ಟಿ(ವೈದ್ಯಕೀಯ), ಸ್ವಾಮಿರಾವ ಕುಲಕರ್ಣಿ(ದಾಸ ಸಾಹಿತ್ಯ), ದೇವಯ್ಯ ಗುತ್ತೇದಾರ್ (ಮಾಧ್ಯಮ), ಡಾ. ಎಸ್.ಎಸ್. ಗುಬ್ಬಿ (ವೈದ್ಯ ಸಾಹಿತ್ಯ), ರವೀಂದ್ರ ಶಾಬಾದಿ(ಸಮಾಜ ಸೇವೆ), ಲಕ್ಷ್ಮಣ ದಸ್ತಿ(ಹೋರಾಟ), ಪವನಕುಮಾರ ವಳಕೇರಿ (ಸಮಾಜ ಸೇವೆ), ಗುಂಡಣ್ಣ ಡಿಗ್ಗಿ(ಹಾಸ್ಯ ಸಾಹಿತ್ಯ), ಸುರೇಖಾ ಜೆ.ಡೆಂಗಿ(ಶಿಕ್ಷಣ), ಸೋಮನಾಥ ಕಟ್ಟಿಮನಿ (ಕನ್ನಡಪರ ಸಂಘಟನೆ) ಅವರಿಗೆ ಸೌಭಾಗ್ಯಸಿರಿ ಕಾಯಕ ರತ್ನ ಪ್ರಶಸ್ತಿ ನೀಡಲಾಯಿತು.

ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪ ಅವರು ಸೌಭಾಗ್ಯಸಿರಿ ಸಾಮಾಜಿಕ ಸೇವಾ ಟ್ರಸ್ಟ್ ಉದ್ಘಾಟಿಸಿದರು. ಮುತ್ಯಾನ ಬಬಲಾದನ ಗುರುಪಾದಲಿಂಗ ಶಿವಯೋಗಿ ನೇತೃತ್ವ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಗುಣ ಭರವಸೆ ವಿಭಾಗದ ಅಧೀಕ್ಷಕ ಎಂಜಿನಿಯರ್‌ ಸುರೇಶ ಎಲ್.ಶರ್ಮಾ ಅಧ್ಯಕ್ಷತೆ ವಹಿಸಿದ್ದರು.

ಗುಲಬರ್ಗಾ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಟ್ರಸ್ಟ್ ಅಧ್ಯಕ್ಷ ಸುರೇಶ ಬಡಿಗೇರ, ಉದ್ಯಮಿ ಸೋಮಶೇಖರ ಟೆಂಗಳಿ, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಾಲಾ ಕಣ್ಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT