ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: 371(ಜೆ) ಸಮರ್ಪಕ ಅನುಷ್ಠಾನಕ್ಕೆ ಮೌನ ಸತ್ಯಾಗ್ರಹ

ಷರತ್ತುಬದ್ಧ ನೋಟಿಸ್ ಕೊಟ್ಟು ಮುಚ್ಚಳಿಕೆ: ಪೊಲೀಸರ ನಡೆಗೆ ಹೋರಾಟಗಾರರ ಅಸಮಾಧಾನ
Published : 16 ಜುಲೈ 2024, 14:29 IST
Last Updated : 16 ಜುಲೈ 2024, 14:29 IST
ಫಾಲೋ ಮಾಡಿ
Comments
‘ಪೊಲೀಸ್‌ ನೋಟಿಸ್ ಕೊಟ್ಟು ಬೆದರಿಕೆ’
‘371 (ಜೆ) ಕಲಂಗಾಗಿ ನಾಲ್ಕೂವರೆ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮೇಲೆ 15ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಯಾರೂ ಕೂಡ ಮೌನ ಸತ್ಯಾಗ್ರಹಕ್ಕೆ ನೋಟಿಸ್ ಕೊಟ್ಟಿಲ್ಲ. ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಟ್ಟಿದ್ದರೂ ಪೊಲೀಸರು ನೋಟಿಸ್ ಕೊಟ್ಟು ಬೆದರಿಕೆ ಹಾಕಿದ್ದಾರೆ’ ಎಂದು ಲಕ್ಷ್ಮಣ ದಸ್ತಿ ಆರೋಪಿಸಿದರು. ‘ಸತ್ಯಾಗ್ರಹದ ಹಿಂದಿನ ದಿನವೇ ಬ್ರಹ್ಮಪುರ ಠಾಣೆಯ ಅಧಿಕಾರಿಗೆ ಫೋನ್ ಕರೆ ಮಾಡಿ ತಿಳಿಸಿದ್ದೆ. ಲಿಖಿತ ಪತ್ರದ ಅಗತ್ಯವಿಲ್ಲ ಎಂದಿದ್ದರು. ಆದರೆ ಬೆಳಿಗ್ಗೆ ಏಕಾಏಕಿ ಷರತ್ತುಬದ್ಧ ನೋಟಿಸ್ ಕೊಟ್ಟು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ನಮ್ಮ ಹೋರಾಟದಲ್ಲಿ ಪೊಲೀಸ್ ನೇಮಕಾತಿ ಮುಂಬಡ್ತಿಯೂ ಸೇರಿದೆ. ಯಾವುದೇ ಸಮುದಾಯ ವರ್ಗಕ್ಕೆ ಸೀಮಿತವಾಗಿಲ್ಲ. ಪೊಲೀಸ್ ನೋಟಿಸ್‌ನಿಂದ ಜನಪರ ಹೋರಾಟಕ್ಕೆ ಹಿನ್ನಡೆಯಾಗಿದ್ದು ಕಲ್ಯಾಣ ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದು ಅಪಮಾನ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT