ಸಂವಿಧಾನದ ಪ್ರತಿ ಸುಟ್ಟವರಿಗೆಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

7

ಸಂವಿಧಾನದ ಪ್ರತಿ ಸುಟ್ಟವರಿಗೆಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಕಲಬುರ್ಗಿ: ನವದೆಹಲಿಯ ಜಂತರ್ ಮಂತರ್‌ನಲ್ಲಿ ಈಚೆಗೆ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದ ಜಗತ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ಮಾಡಿದರು.

ದೇಶದಲ್ಲಿ ಸಂವಿಧಾನವು ಆಪತ್ತಿಗೆ ಒಳಗಾಗುತ್ತಿದೆ. ಕೋಮುವಾದಿಗಳು ಸಂವಿಧಾನ ವಿರೋಧಿ ನಂಬಿಕೆಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ. ಮನುಸ್ಮೃತಿ ಆಧಾರವಿಲ್ಲವೆಂಬ ಕಾರಣಕ್ಕಾಗಿ ತಾವು ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನಿಲುವು ಪ್ರಕಟಿಸಿದ್ದು, ಇತಿಹಾಸದಲ್ಲಿ ದಾಖಲೆಯಾಗಿದೆ. ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗವಾಗಿದ್ದು, ಸಹಜವಾಗಿಯೇ ಅದು ಸಂವಿಧಾನದ ಆಧಾರದಲ್ಲಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದರೂ ಸಂವಿಧಾನ ವಿರೋಧಿ ತನ್ನ ನಿಲುವನ್ನು ದೃಢಗೊಳಿಸಿಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದೇಶದಲ್ಲಿ ಸಂವಿಧಾನವನ್ನು ದಹಿಸುವ, ಸಂವಿಧಾನ ವಿರೋಧಿ ಮನೋಭಾವ ಬೆಳೆಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಸಂವಿಧಾನದ ಪ್ರತಿ ಸುಟ್ಟವರಿಗೆ ಕಠಿಣ ಶಿಕ್ಷೆ ನೀಡಬೇಕು. ಈಗಾಗಲೇ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಅನಂತಕುಮಾರ ಹೆಗಡೆ ಹಾಗೂ ಇತರರನ್ನು ಸಂಸತ್ ಸದಸ್ಯತ್ವದಿಂದ ಕೈ ಬಿಡಬೇಕು. ಸಂವಿಧಾನ ವಿರೋಧಿ ನಿಲುವು ಹೊಂದಿರುವ ಆರ್‌ಎಸ್‌ಎಸ್‌ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಮುಖಂಡರಾದ ನೀಲಾ ಕೆ., ಅರ್ಜುನ ಭದ್ರೆ, ಡಾ.ಪ್ರಭು ಖಾನಾಪುರೆ, ಡಾ.ಮೀನಾಕ್ಷಿ ಬಾಳಿ, ಆರ್.ಕೆ.ಹುಡಗಿ, ಡಾ.ಕಾಶಿನಾಥ ಅಂಬಲಗಿ, ಡಾ.ವಿಠಲ ದೊಡ್ಡಮನಿ, ಸುನಿಲ್ ಹುಡಗಿ, ಚಂದಮ್ಮ ಗೋಳಾ, ನಂದಾದೇವಿ ಮಂಗೊಂಡಿ, ಡಾ.ಮಲ್ಲೇಶಿ ಸಜ್ಜನ, ಅಶ್ವಿನಿ ಮದನಕರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !