ಬುಧವಾರ, ನವೆಂಬರ್ 25, 2020
19 °C

ರಾಚೋಟೇಶ್ವರ ಜಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ರಾಚಣ್ಣಾ ವಾಗ್ದರ್ಗಿ ಗ್ರಾಮದಲ್ಲಿ ನ.17ರಂದು ನಡೆಯಬೇಕಿದ್ದ ರಾಚೋಟೇಶ್ವರ ಜಾತ್ರೆಯನ್ನು ಕೊರೊನಾ ಕಾರಣ ರದ್ದುಗೊಳಿಸಲಾಗಿದೆ.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಜಾತ್ರಾ ಸಮಿತಿ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಕ್ತರು ದೇವಸ್ಥಾನಕ್ಕೆ ಬರದೆ ತಮ್ಮ ಮನೆಯಲ್ಲಿಯೇ ಪೂಜೆ ಸಲ್ಲಿಸಬೇಕು ಎಂದು ರಾಚೋಟೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ದರಾಮ ಕಂದಗೋಳೆ ಮನವಿ ಮಾಡಿದ್ದಾರೆ.

ಬೆಣ್ಣೆತೊರಾ ನದಿ ದಡದಲ್ಲಿರುವ ರಾಚೋಟೇಶ್ವರ ದೇವಸ್ಥಾನದ ಜಾತ್ರೆ ದೀಪಾವಳಿ ಹಬ್ಬದ ಮರುದಿನ ನಡೆಯುತ್ತದೆ. ಕಲಬುರ್ಗಿ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.