ರಾಮಲಿಂಗೇಶ್ವರ ರಥೋತ್ಸವ, ಧರ್ಮಸಭೆ

ಕಾಳಗಿ: ತಾಲ್ಲೂಕಿನ ಮೊಘಾ ಗ್ರಾಮದ ರಾಮಲಿಂಗೇಶ್ವರ ಪ್ರಥಮ ರಥೋತ್ಸವ ಸಂಭ್ರಮದಿಂದ ಭಾನುವಾರ ಸಂಜೆ ಜರುಗಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ‘ಮೊಘಾ ರಾಮಲಿಂಗೇಶ್ವರ ದೇವಾಲಯದ ನವೀಕರಣಕ್ಕಾಗಿ ಎಎಸ್ಐ ₹3.10ಕೋಟಿ ಮಂಜೂರು ಮಾಡಿದೆ. ಈ ದೇವಾಲಯಕ್ಕೆ ಹೋಗುವ ರಸ್ತೆ ಮುಂದಿನ ವರ್ಷದವರೆಗೆ ನಿರ್ಮಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಮಾತನಾಡಿದರು.
ರಥೋತ್ಸವದಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ, ಭರತನೂರಿನ ಗುರುನಂಜೇಶ್ವರ ಮಹಾಸ್ವಾಮೀಜಿ, ನರನಾಳದ ಶಿವಕುಮಾರ ಶಿವಾಚಾರ್ಯ, ಹುಲಸೂರಿನ ಡಾ.ಶಿವಾನಂದ ಮಹಾಸ್ವಾಮೀಜಿ, ಪಸ್ತಾಪುರದ ದೇವಿಂದ್ರ ಮಹಾರಾಜ ಸಾನಿಧ್ಯ ವಹಿಸಿದ್ದರು.
ಭೀಮಶೇನರಾವ ಕುಲಕರ್ಣಿ, ಅಶೋಕ ಪಾಟೀಲ ಚಿಂಚೋಳಿ, ಚಂದ್ರಶೇಖರ ಹರಸೂರ, ಗೌತಮ ಪಾಟೀಲ, ಸಂತೋಷ ಗಡಂತಿ, ಶೈಲೇಶ ಹುಲಿ, ರಾಮರಾವ ಪಾಟೀಲ, ಸಿದ್ದು ಪಾಟೀಲ, ಅಲ್ಲಮಪ್ರಭು ಹುಲಿ, ಗೌರಿಶಂಕರ, ಮಲ್ಲು ಕೊಡಂಬಲ, ಶಿವಯೋಗಿ ರುಸ್ತಂಪುರ, ಆನಂದಸ್ವಾಮಿ, ನೀಲಕಂಠ ಸೀಳಿನ್, ಸಂತೋಷಕುಮಾರ ಕುಂಬಾರ, ನವಲಿಂಗ ಪಾಟೀಲ, ಪ್ರಶಾಂತ ಕದಂ ಸೆರಿದಂತೆ ಅನೇಕ ಭಕ್ತರು
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.