ಚಿಂಚೋಳಿ: ‘ಶರಣರು ಹಾಗೂ ಸೂಫಿಗಳು ತಮ್ಮ ಬದುಕಿನುದ್ದಕ್ಕೂ ಸರಳವಾದ ಆಡಂಬರ ರಹಿತ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ನಡೆ–ನುಡಿ ಒಂದಾಗಿಸಿಕೊಂಡ ಶರಣರ, ಸೂಫಿಗಳ ಜೀವನ 21ನೇ ಶತಮಾನದಲ್ಲೂ ಪ್ರಸ್ತುತವಾಗಿದೆ’ ಎಂದು ಕಲಬುರಗಿಯ ಉಪನ್ಯಾಸಕಿ ಕರುಣಾ ಜಮದರಖಾನಿ ತಿಳಿಸಿದರು.

ಅವರು ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಲಿಂ.ಶರಣೆ ಜಗದೇವಿ ಹಣಮಂತಪ್ಪ ಬೇಮಳಗಿ ದತ್ತಿ ಕಾರ್ಯಕ್ರಮದಲ್ಲಿ ಅವರು ‘ಶರಣರು ಮತ್ತು ಸೂಫಿ ಸಂತರು’ ಕುರಿತು ಉಪನ್ಯಾಸ ನೀಡಿದರು.

ಶರಣರು ಮತ್ತು ಸೂಫಿಗಳು ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಿರುವುದರಿಂದ ಅವರ ನಡೆ ನುಡಿ ಒಂದಾಗಿತ್ತು. ಆದರೆ, ಇಂದು ಆಡಂಬರದ ಜೀವನದ ಬೆನ್ನು ಹತ್ತಿದ ಜನರಲ್ಲಿ ದುರಾಸೆ, ಹಪಾಹಪಿತನ ವ್ಯಾಪಕವಾಗಿದೆ ಎಂದು ವಿಷಾದಿಸದರು.

ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ವಡ್ಡನಕೇರಿ ಉದ್ಘಾಟಿಸಿದರು. ಉಪಪ್ರಾಂಶುಪಾಲ ಶಂಸುದ್ದಿನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ವೀರೇಶ ಬೇಮಳಗಿ ಮತ್ತಿತರರು ಇದ್ದರು.

ನಿವೃತ್ತ ಶಿಕ್ಷಕ ಗುರುಲಿಂಗಪ್ಪ ಕೋರಿ, ಶಿಕ್ಷಕಿಯರಾದ ಜ್ಞಾನೇಶ್ವರಿ ಸಜ್ಜನಶೆಟ್ಟಿ, ಚಂದ್ರಕಲಾ ವಿ. ಪಿರೆಡ್ಡಿ, ನಾಗರತ್ನಾ ಮಲ್ಲಿಕಾರ್ಜುನ, ಫಿರದೋಸ ತಹಶೀನ್, ಜಯಶ್ರೀ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ಶರಣಯ್ಯಸ್ವಾಮಿ ಅಲ್ಲಾಪುರ, ವಿಶ್ವನಾಥ ಮಠಪತಿ ವಚನ ಗಾಯನ ನಡೆಸಿಕೊಟ್ಟರು. ಮಹೇಶ ಬೇಮಳಗಿ ಸ್ವಾಗತಿಸಿದರು. ಬಸವರಾಜ ಐನೋಳ್ಳಿ ನಿರೂಪಿಸಿದರು. ಗಣಪತಿ ದೇವಕತೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.