ಮಂಗಳವಾರ, ಸೆಪ್ಟೆಂಬರ್ 29, 2020
27 °C

ರಾಯಕೋಡದಲ್ಲಿ ಹಾವುಗಳ ಸರಸ ಸಲ್ಲಾಪ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ರಾಯಕೋಡ್ ಗ್ರಾಮದಲ್ಲಿ ಮಂಗಳವಾರ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದುದು ಜನರನ್ನು ಆಕರ್ಷಿಸಿತು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಗ್ರಾಮದ ಸರ್ಕಾರಿ ಶಾಲೆಯ ರಸ್ತೆಯಲ್ಲಿನ ನೀರಿನ ಟ್ಯಾಂಕ್ ಬಳಿ ಎರಡು ಉರಗಗಳು ಸಲ್ಲಾಪದಲ್ಲಿ ತೊಡಗಿದ್ದುದನ್ನು ಗ್ರಾಮಸ್ಥರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

10 ರಿಂದ 15 ಅಡಿ ಉದ್ದನೆಯ ಎರಡು ಹಾವುಗಳು ಕುರುಡು ಪ್ರೇಮ ಸಂಕೇತಿಸುವಂತೆ ನಡುರಸ್ತೆಯಲ್ಲಿಯೇ  45 ನಿಮಿಷಕ್ಕೂ ಅಧಿಕ ಸಮಯ ಸಲ್ಲಾಪ ನಡೆಸಿದವು.

ಸುದ್ದಿ ಹಬ್ಬಿ ಜನರು ನೋಡಲು ಅಲ್ಲಿಗೆ ಧಾವಿಸಿದರೂ ಕೂಡ ಅವುಗಳು ಕದಲಲಿಲ್ಲ. ಸಾಕಷ್ಟು ಸಮಯ ಒಂದಕ್ಕೊಂದು ಸುತ್ತಿಕೊಂಡು ‘ಮುದ್ದಾಡಿದವು’. ಒಂದೊಂದು ಹಾವು ನೆಲಬಿಟ್ಟು ಸುಮಾರು 3 ಅಡಿಗಳ ಎತ್ತರಕ್ಕೆ ತನ್ನ ಮುಖ ಎತ್ತಿ ಒಂದಕ್ಕೊಂದು ಸುತ್ತಿಕೊಳ್ಳುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು. ನಂತರ ಎರಡೂ ಹಾವುಗಳು ಹಸಿರು ಪೊದೆಯಲ್ಲಿ ಮಾಯವಾದವು ಎಂದು ಸ್ಥಳೀಯ ಮುಖಂಡ ಚಂದ್ರು ಮೈಲ್ವಾರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.