‘ಕುರಿಗಾಹಿಯು ಸೈಕಲ್ ಮೇಲೆ ಕುಡುಗೋಲು ಇಟ್ಟುಕೊಂಡು ಹೋಗುತ್ತಿದ್ದ ಮಾರ್ಗದಲ್ಲೇ ವಿದ್ಯಾರ್ಥಿನಿ ಸ್ಕೂಟರ್ ಮೇಲೆ ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ಕುರಿಗಾಹಿ ಇದ್ದಕ್ಕಿದ್ದಂತೆ ಎಡಭಾಗಕ್ಕೆ ಚಲಿಸಿದ್ದಾನೆ. ಹಿಂದೆ ಬರುತ್ತಿದ್ದ ವಿದ್ಯಾರ್ಥಿನಿ ತಕ್ಷಣ ಸ್ಕೂಟರ್ ನಿಲ್ಲಿಸಲು ಯತ್ನಿಸಿದಾಗ ಅದು ಜಾರಿ ಮುಗ್ಗರಿಸಿ ಬಿದ್ದಿದ್ದಾರೆ. ಆಗ ಕುಡುಗೋಲು ನೇರವಾಗಿ ಕುತ್ತಿಗೆಗೆ ತಗುಲಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಸ್ಪತ್ರೆ ಸಾಗಿಸುವಾಗ ಮಾರ್ಗದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.