ಕಲಬುರಗಿ: ನಗರದ ಆರಾಧನಾ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ–2ರ ಗಣಿತ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಮೂವರು ಖಾಸಗಿ ಅಭ್ಯರ್ಥಿಗಳನ್ನು ಡಿಬಾರ್ (ಎಂಪಿಸಿ) ಮಾಡಲಾಗಿದೆ.

‘ಸಾಮೂಹಿಕ ನಕಲು ತಡೆಗೆ ವೆಬ್ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ನಕಲು ಮಾಡುತ್ತಿರುವುದನ್ನು ನೋಡಿದ ವೆಬ್ಕಾಸ್ಟಿಂಗ್ ವೀಕ್ಷಣಾ ಕೇಂದ್ರದ ಸಿಬ್ಬಂದಿ, ತಕ್ಷಣವೇ ಪರೀಕ್ಷಾ ಕೇಂದ್ರದ ಅಧೀಕ್ಷಕ ಚಂದ್ರಕಾಂತ ಅವರ ಗಮನಕ್ಕೆ ತಂದರು. ಚಂದ್ರಕಾಂತ ಅವರು ಖಾಸಗಿ ಅಭ್ಯರ್ಥಿಗಳನ್ನು ತಪಾಸಣೆ ಮಾಡಿದರು. ನಕಲು ಮಾಡಿದ್ದು ಸಾಬೀತು ಆಗುತ್ತಿದ್ದಂತೆ ಆ ಮೂವರನ್ನು ಡಿಬಾರ್ ಮಾಡಿದರು’ ಎಂದು ಕಲಬುರಗಿ ಉತ್ತರ ಬಿಇಒ ಸೋಮಶೇಖರ ಚಿಂಚೋಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.